ಐಪಿಎಲ್ 2024: ರೆಕಾರ್ಡ್ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

Krishnaveni K
ಗುರುವಾರ, 11 ಏಪ್ರಿಲ್ 2024 (16:50 IST)
ಮುಂಬೈ: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿರುವ ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮಹತ್ವದ ದಾಖಲೆಯೊಂದನ್ನು ಮಾಡಲಿದ್ದಾರೆ.

ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಕೊಹ್ಲಿ 1 ಶತಕವೂ ಸೇರಿದಂತೆ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಇದೇ ಸೀಸನ್ ನಲ್ಲಿ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ಗೌರವಕ್ಕೂ ಪಾತ್ರರಾಗಿದ್ದಾರೆ. ಇದೀಗ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಹತ್ವದ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದರೆ ಐಪಿಎಲ್ ನಲ್ಲಿ 250 ಸಿಕ್ಸರ್ ಸಿಡಿಸಿದ ನಾಲ್ಕನೇ ಆಟಗಾರ ಎಂಬ ದಾಖಲೆ ಮಾಡಲಿದ್ದಾರೆ. ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್ ಮೂಲದ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 357 ಸಿಕ್ಸರ್ ಸಿಡಿಸಿದ್ದರು.

ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ 264 ಸಿಕ್ಸರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಕೊಹ್ಲಿ ನಾಲ್ಕು ಸಿಕ್ಸರ್ ಸಿಡಿಸಿದರೆ ರೋಹಿತ್ ನಂತರ ಈ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡ್ತೀನಿ ಆದ್ರೆ ಒಂದು ಷರತ್ತು: ಮೊಹ್ಸಿನ್ ನಖ್ವಿ ಕೊಬ್ಬು ಎಷ್ಟಿದೆ ನೋಡಿ

ಮೂವರು ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿದ ಬಿಸಿಸಿಐ: ಇದೆಂಥಾ ಅನ್ಯಾಯ

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

ಮುಂದಿನ ಸುದ್ದಿ
Show comments