ಮೊಹಮ್ಮದ್ ಶಮಿ ಮಗಳ ಜೊತೆ ವಿರಾಟ್ ಕೊಹ್ಲಿ ಡ್ಯಾನ್ಸ್.. ವೈರಲ್ ವಿಡಿಯೋ

ಮಂಗಳವಾರ, 29 ಆಗಸ್ಟ್ 2017 (11:53 IST)
ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಇತ್ತೀಚಿನ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ಬೇರಾವೂದೂ ಅಲ್ಲ. ಎರಡು ವರ್ಷದ ಮಕ್ಕಳು ಅಯ್ಯರಾ ಜೊತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿರುವುದು.

ಭಾರತ ತಮಡ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಗೆದ್ದು, ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಸಂಭ್ರಮಾಚರಣೆ ವೇಳೆ ಡ್ಯಾನ್ಸ್ ಮಾಡಿದ ದೃಶ್ಯಗಳಿವು. ಶಮಿ ಮಗಳು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಹಾಡಿಗೆ ತಕ್ಕಂತೆ ನರ್ತಿಸುತ್ತಿರುವುದು ಟ್ವಿಟರಾತಿಗಳ ಹೃದಯ ಗೆದ್ದಿದೆ.

ಐ ಗಾಟ್ ಎ ಗರ್ಲ್ ಹಾಡಿಗೆ ವಿರಾಟ್ ಜೊರೆ ಅಯ್ಯರಾ ಹೆಜ್ಜೆ ಹಾಕಿರುವ ವಿಡಿಯೋ ಟ್ವಿಟ್ಟರ್`ನಲ್ಲಿ 9000 ಸಾವಿರಕ್ಕೂ ಅಧಿಕ ಲೈಕ್ ಗಿಟ್ಟಿಸಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಮ್ಮ ನೆಲದಲ್ಲಿ ತಾಕತ್ತು ತೋರಿಸಿ ನೋಡೋಣ: ಕೊಹ್ಲಿಗೇ ಸವಾಲ್!