Daily Horoscope

Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಕೊಹ್ಲಿ-ಬೆನ್ ಸ್ಟೋಕ್ಸ್ ನಡುವೆ ಕಿತ್ತಾಟ: ಮಧ್ಯಕಪ್ರವೇಶಿಸಿದ ಅಂಪಾಯರ್

ಭಾರತ-ಇಂಗ್ಲೆಂಡ್ ಟೆಸ್ಟ್
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದೆ.

 
13 ನೇ ಓವರ್ ಪೂರ್ತಿ ಮಾಡಿದ ಮೊಹಮ್ಮದ್ ಸಿರಾಜ್ ರನ್ನು ಬೆನ್ ಸ್ಟೋಕ್ಸ್ ಕೆಣಕಿದರು. ಇದು ವಿರಾಟ್ ಕೊಹ್ಲಿಯನ್ನು ಸಿಟ್ಟಿಗೇಳಿಸಿತು. ಅವರೂ ಮಧ‍್ಯಪ್ರವೇಶಿಸಿ ಸ್ಟೋಕ್ಸ್ ಜೊತೆ ಮಾತಿನ ಚಕಮಕಿ ನಡೆಸಿದರು.

 ಈ ಸಂದರ್ಭದಲ್ಲಿ ಅಂಪಾಯರ್ ಮಧ್ಯಪ್ರವೇಶಿಸಿ ಇಬ್ಬರನ್ನೂ ತಣ್ಣಗಾಗಿಸಿದರು. ಇದುವರೆಗೆ ಈ ಟೆಸ್ಟ್ ಸರಣಿಯಲ್ಲಿ ಆಟಗಾರರು ನೇರವಾಗಿ ಕಿತ್ತಾಟ ನಡೆಸಿದ್ದು ಕಂಡುಬರಲಿಲ್ಲ. ಆದರೆ ಈ ಪಂದ್ಯದಲ್ಲಿ ಮಾತಿನ ಚಕಮಕಿ ನಡೆದಿದೆ.

ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಜಾನಿ ಬೇರ್ ಸ್ಟೋ 10 ಮತ್ತು  ಬೆನ್ ಸ್ಟೋಕ್ಸ್ 14 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಪಾಯಕಾರಿ ಜೋ ರೂಟ್ 5 ರನ್ ಗಳಿಸಿ ಮೊಹಮ್ಮದ್ ಸಿರಾಜ್ ರ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಆಗಿ ಔಟಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈಗೆ ಆಗಮಿಸಿದ ‘ತಲಾ’ ಧೋನಿ