Publish Date: Thu, 04 Mar 2021 (10:06 IST)
Updated Date: Thu, 04 Mar 2021 (10:08 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ಗೆ ಆರಂಭಿಕ ಆಘಾತ ಸಿಕ್ಕಿದೆ.
ಕಳೆದೆರಡು ಟೆಸ್ಟ್ ಗಳಲ್ಲಿ ಭಾರತಕ್ಕೆ ಮೊದಲ ಬ್ರೇಕ್ ಥ್ರೂ ನೀಡುತ್ತಿರುವ ಸ್ಪಿನ್ನರ್ ಅಕ್ಸರ್ ಪಟೇಲ್ ಮತ್ತೆ ಕೈ ಚಳಕ ತೋರಿದ್ದಾರೆ. ಇಂದೂ ಡೊಮಿನಿಕ್ ರೂಪದಲ್ಲಿ ಮೊದಲ ವಿಕೆಟ್ ಅಕ್ಸರ್ ಪಾಲಾಗಿದೆ. 2 ರನ್ ಗಳಿಸಿದ ಡೊಮಿನಿಕ್ ಬೌಲ್ಡ್ ಔಟ್ ಆಗಿದ್ದಾರೆ.
ಸಾಮಾನ್ಯವಾಗಿ ಆರಂಭಿಕ ವಿಕೆಟ್ ವೇಗದ ಬೌಲರ್ ಗಳ ಪಾಲಾಗುತ್ತದೆ. ಆದರೆ ಕಳೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅಕ್ಸರ್ ಮೊದಲ ವಿಕೆಟ್ ಕೀಳುವ ಮೂಲಕ ಸ್ಪಿನ್ನರ್ ಸ್ನೇಹೀ ಪಿಚ್ ಎಂದು ಮತ್ತೆ ಸಾಬೀತುಪಡಿಸಿದ್ದಾರೆ.