Publish Date: Sat, 27 Dec 2025 (14:46 IST)
Updated Date: Sat, 27 Dec 2025 (14:49 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಎಂಥಾ ಹೃದಯವಂತ ಎನ್ನುವುದಕ್ಕೆ ಸಾಕ್ಷಿಯಾಗುವಂತಿದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ.
ಸೆಲೆಬ್ರಿಟಿಗಳು ಏರ್ ಪೋರ್ಟ್ ನಲ್ಲಿ ಬರುವ ಮತ್ತು ನಿರ್ಗಮಿಸುವ ಕ್ಷಣಗಳನ್ನು ಕಾದು ನಿಂತು ಸೆರೆಹಿಡಿಯುವುದನ್ನೇ ಕಾಯಕ ಮಾಡಿಕೊಂಡಿರುವ ಫೋಟೋಗ್ರಾಫರ್ ಗಳಿದ್ದಾರೆ. ಈ ಪಪ್ಪಾರಾಜಿಗಳ ಬಗ್ಗೆ ಇತ್ತೀಚೆಗೆ ಒಬ್ಬ ಸೆಲೆಬ್ರಿಟಿ ಕೀಳಾಗಿ ಮಾತನಾಡಿದ್ದಿದೆ. ಆದರೆ ಕೆಲವು ಸೆಲೆಬ್ರಿಟಿಗಳು ಇವರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.
ಅವರಲ್ಲಿ ವಿರಾಟ್ ಕೊಹ್ಲಿಯೂ ಒಬ್ಬರು. ಇದೀಗ ವಿಜಯ್ ಹಜಾರೆ ಟ್ರೋಫಿ ಮುಗಿಸಿ ಕೊಹ್ಲಿ ಬೆಂಗಳೂರಿನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಸಾಕಷ್ಟು ಪಪ್ಪಾರಾಜಿಗಳು ಅವರ ಬಳಿ ಫೋಟೋಗಾಗಿ ಮುತ್ತಿಗೆ ಹಾಕಿವೆ.
ತಮ್ಮ ಜೊತೆ ಫೋಟೋಗಾಗಿ ಮುತ್ತಿಕೊಂಡ ಫೋಟೋಗ್ರಾಫರ್ ಗಳಿಗೆ ಕೊಹ್ಲಿ ನಿರಾಸೆ ಮಾಡಲಿಲ್ಲ. ಎಲ್ಲರನ್ನೂ ಮಾತನಾಡಿಸಿದ್ದಲ್ಲದೆ, ತಾವಾಗಿಯೇ ಫೋಟೋಗೆ ಪೋಸ್ ನೀಡಿದ್ದಾರೆ. ಎಲ್ಲರೂ ಫೋಟೋ ತೆಗೆಯಲು ಅನುಕೂಲವಾಗಲಿ ಎಂದು ತಾವೇ ಅವರಿಗೆ ಬೇಕಾದಂತೆ ತಾಳ್ಮೆಯಿಂದ ನಿಂತು ಪೋಸ್ ಕೊಟ್ಟಿದ್ದಾರೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಈ ವಿಡಿಯೋ ನೋಡಿದ ಮೇಲೂ ಅವರನ್ನು ಧ್ವೇಷಿಸಲು ಸಾಧ್ಯವೇ ಎಂದಿದ್ದಾರೆ.