Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮತ್ತು ಅನುಷ್ಕಾರ ಹೊಸ ಐಶಾರಾಮಿ ಬಂಗಲೆಯ ವೆಚ್ಚವೆಷ್ಟು ಗೊತ್ತಾ!

ವಿರಾಟ್ ಕೊಹ್ಲಿ ಮತ್ತು ಅನುಷ್ಕಾರ ಹೊಸ ಐಶಾರಾಮಿ ಬಂಗಲೆಯ ವೆಚ್ಚವೆಷ್ಟು ಗೊತ್ತಾ!

ಗುರುಮೂರ್ತಿ

ದೆಹಲಿ , ಬುಧವಾರ, 13 ಡಿಸೆಂಬರ್ 2017 (15:53 IST)
ಬಾಲಿವುಡ್ ಸುಂದರಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಡಿಸೆಂಬರ್ 11, 2017 ರಂದು ಇಟಲಿಯ ಟಸ್ಕನಿಯಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರ ನಡುವೆ ತಮ್ಮ 4 ವರ್ಷಗಳ ಪ್ರೇಮಕ್ಕೆ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಟ್ವೀಟರ್/ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮದುವೆ ದಿನವನ್ನು ಇಬ್ಬರು ಘೋಷಿಸಿದ್ದು ಇದಕ್ಕೆ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ವಿವಾಹವನ್ನು ಬಿಗಿ ಭದ್ರತೆಯ ನಡುವೆ ರಹಸ್ಯವಾಗಿ ನಡೆದಿದೆ. ಈ ವಿವಾಹ ಮಹೋತ್ಸವಕ್ಕೆ ಆಹ್ವಾನಿತ ಅತಿಥಿಗಳನ್ನು ಮಾತ್ರ ಅನುಮತಿಸಲಾಗಿತ್ತು.
 
ಇದೀಗ ಇವರಿಬ್ಬರ ಕುರಿತು ಹೊಸ ಸುದ್ದಿಯೊಂದು ಬಂದಿದೆ ಅದೇನೆಂದರೆ ಈ ನವ ಜೋಡಿಗಳು ಸದ್ಯದಲ್ಲೇ ಮುಂಬೈ ಅಪಾರ್ಟ್‌ಮೆಂಟ್‌ನಿಂದ ಬೇರೆಡೆ ವಾಸ್ತವ್ಯ ಹೂಡಲಿದ್ದು ಅವರು ವಾಸಿಸುವ ಮನೆಗೆ 34 ಕೋಟಿ ವೆಚ್ಚವಾಗಿರುವುದು. ಹೌದು ಈ ಮನೆಯು ತುಂಬಾ ಐಷಾರಾಮಿಯಾಗಿದ್ದು ಮುಂಭಾಗದಲ್ಲಿ ಆಕರ್ಷಕವಾದ ಸಮುದ್ರ ನೋಟವನ್ನು ಹೊಂದಿದೆ. 
 
ಇದು 7171 ಚದರ ಅಡಿಯಷ್ಟು ವಿಶಾಲವಾಗಿದ್ದು ಎಲ್ಲಾ ರೀತಿಯ ಅಗತ್ಯತೆಗಳನ್ನೊಳಗೊಂಡ 5 ಐಷಾರಾಮಿ ಕೋಣೆಗಳನ್ನು ಹೊಂದಿದೆ. ಅಲ್ಲದೇ ಈ ಮನೆಯಲ್ಲಿ ವಿಶಾಲವಾದ ಮೇಲ್ಛಾವಣಿ ಇದ್ದು ಜಕುಝಿ ಮಾದರಿಯ ಈಜುಕೊಳವಿದೆ. ವಿರಾಟ್ ಹಾಗೂ ಅನುಷ್ಕಾರಿಗಾಗಿ ಉತ್ಕೃಷ್ಟ ಮಾದರಿಯ ವ್ಯಾಯಾಮ ಕೊಠಡಿ ಹಾಗೂ ಮನೆಯ ಒಳಗೆ ಜಾಗಿಂಗ್ ಮತ್ತು ಮುಂಜಾನೆ ನಡಿಗೆಗೆ ಅನುಕೂವಾಗಿರುವ ಎಲ್ಲಾ ಸೌಕರ್ಯವನ್ನು ಈ ಮನೆ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ದ್ವಿಶತಕ! ಪತ್ನಿಗೆ ಕಿಸ್ ಕೊಟ್ಟು ಉತ್ಸಾಹ ಹೆಚ್ಚಿಸಿಕೊಂಡ ಬ್ಯಾಟಿಂಗ್ ದಾಂಡಿಗ!