ಮೊದಲ ವೆಡ್ಡಿಂಗ್ ಅನಿವರ್ಸರಿ ದಿನವೇ ಪತ್ನಿ ಅನುಷ್ಕಾಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?!

Webdunia
ಮಂಗಳವಾರ, 11 ಡಿಸೆಂಬರ್ 2018 (10:47 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮೊದಲ ಟೆಸ್ಟ್ ಗೆದ್ದ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಇಂದು ತಮ್ಮ ವಿವಾಹ ವಾರ್ಷಿಕೋತ್ಸವ ಖುಷಿ.


ಮೊದಲ ವರ್ಷದ ಆನಿವರ್ಸರಿ ಆಚರಿಸಿಕೊಳ್ಳಲು ಈಗಾಗಲೇ ಅನುಷ್ಕಾ ಆಸ್ಟ್ರೇಲಿಯಾ ತಲುಪಿದ್ದಾರೆ. ಕಳೆದ ವರ್ಷ ಇಟೆಲಿಯಲ್ಲಿ ಇದೇ ದಿನ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇಂದು ಆಸ್ಟ್ರೇಲಿಯಾದಲ್ಲಿ ಸಂಭ‍್ರಮಾಚರಣೆ ಮಾಡುತ್ತಿದೆ.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಅನುಷ್ಕಾ ಬಂದ ಮೇಲೆ ನನ್ನ ಜೀವನವೇ ಬದಲಾಗಿದೆ. ನಾನು ಹೆಚ್ಚು ಪ್ರಾಕ್ಟಿಕಲ್ ಆದೆ. ಮೊದಲು ನಾನು ಹೀಗಿರಲಿಲ್ಲ. ನನ್ನ ಪತ್ನಿ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿದಳು. ಅವಳ ಮತ್ತು ನನ್ನ ಜಗತ್ತೇ ಬೇರೆಯಾಗಿತ್ತು. ಆದರೆ ನಾವಿಬ್ಬರೂ ನಮ್ಮಿಬ್ಬರ ಬೆಳವಣಿಗೆಗೆ ಪರಸ್ಪರ ಸಹಕಾರ ನೀಡಿದೆವು’ ಎಂದು ಕೊಹ್ಲಿ ಅನುಷ್ಕಾ ಬಗ್ಗೆ ಹೊಗಳಿದ್ದಾರೆ.

ಇಂದು ಈ ಜೋಡಿ ಆಸ್ಟ್ರೇಲಿಯಾದ ಖಾಸಗಿ ತಾಣವೊಂದರಲ್ಲಿ ಸಮಯ ಕಳೆಯಲಿದೆ ಎನ್ನಲಾಗಿದೆ. ಹೇಗಿದ್ದರೂ ಮೊದಲ ಟೆಸ್ಟ್ ಮುಗಿದು, ಇಂದು ಬಿಡುವಿನ ದಿನವಾಗಿರುವುದರಿಂದ ಈ ಹಾಟ್ ಜೋಡಿಗೆ ಸಂಭ್ರಮಾಚರಿಸಲು ತಕ್ಕ ಸಮಯವೇ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒಬ್ಬರನ್ನೊಬ್ಬರು ನೋಡಿ ಎಂಥಾ ಖುಷಿ ವಿಡಿಯೋ ನೋಡಿ

ಕೊಹ್ಲಿ, ರೋಹಿತ್ ಆಡುವ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಲೈವ್ ಎಲ್ಲಿ ನೋಡಬೇಕು

ಫಿಟ್ ಆಗಿದ್ರೂ ನನ್ನ ಯಾಕೆ ಕಡೆಗಣಿಸ್ತಿದ್ದೀರಿ: ಆಯ್ಕೆ ಸಮಿತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೊಹಮ್ಮದ್ ಶಮಿ

ಬೆಳ್ಳಂ ಬೆಳಿಗ್ಗೆ ಆಸ್ಟ್ರೇಲಿಯಾಗೆ ಹೊರಟ ರೋಹಿತ್ ಶರ್ಮಾ, ಕೊಹ್ಲಿ: ಬೀಳ್ಕೊಡಲು ಬಂದ ಫ್ಯಾನ್ಸ್ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments