Select Your Language

Notifications

webdunia
webdunia
webdunia
webdunia

ಧೋನಿ ಪವರ್ ಎದುರು ಬಾಲ ಮುದುರಿಕೊಂಡ ವಿರಾಟ್ ಕೊಹ್ಲಿ

ಧೋನಿ ಪವರ್ ಎದುರು ಬಾಲ ಮುದುರಿಕೊಂಡ ವಿರಾಟ್ ಕೊಹ್ಲಿ
ಪುಣೆ , ಭಾನುವಾರ, 6 ಮೇ 2018 (07:03 IST)
ಪುಣೆ: ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸೋಲೇ ಗತಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು 6 ವಿಕೆಟ್ ಗಳಿಂದ ಹೀನಾಯವಾಗಿ ಸೋಲನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಪಾರ್ಥಿವ್ ಪಟೇಲ್ (53) ಮತ್ತು ಟಿಮ್ ಸೌಥಿ (36) ಬಿಟ್ಟರೆ ಉಳಿದವರೆಲ್ಲಾ ಕಳಪೆ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಹಿರಿಯ ಸ್ಪಿನ್ನರ್ ಗಳಾದ ಹರ್ಭಜನ್ ಸಿಂಗ್ ಎಬಿಡಿ ವಿಲಿಯರ್ಸ್ ವಿಕೆಟ್ ಕಿತ್ತರೆ, ಜಡೇಜಾ ವಿರಾಟ್ ಕೊಹ್ಲಿ ವಿಕೆಟ್ ಕಿತ್ತು ಆರ್ ಸಿಬಿ ಹಲ್ಲು ಕಿತ್ತರು. ಇದರಿಂದಾಗಿ ಅಂತಿಮವಾಗಿ ಆರ್ ಸಿಬಿಗೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್ ಸಿಬಿಯ ಈ ಮೊತ್ತ ನೋಡಿಯೇ ಚೆನ್ನೈ ಅರ್ಧ ಪಂದ್ಯ ಗೆದ್ದು ಬೀಗಿತ್ತು. ಅಂತಿಮವಾಗಿ ಸ್ವತಃ ನಾಯಕ ಧೋನಿಯೇ ನಿಂತು ತಮ್ಮ ಪವರ್ ಹಿಟ್ ಗಳಿಂದ 31 ರನ್ ಗಳಿಸಿ ತಂಡವನ್ನು 18 ಓವರ್ ಗಳಲ್ಲೇ 4 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಮುಟ್ಟಿಸಿದರು.  ಇದರೊಂದಿಗೆ ಮತ್ತೆ ವಿರಾಟ್ ಬಳಗಕ್ಕೆ ಮುಖಭಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ನಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ