Publish Date: Mon, 23 Jan 2017 (09:11 IST)
Updated Date: Mon, 23 Jan 2017 (09:15 IST)
ಕೋಲ್ಕತ್ತಾ: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯ ಸೋತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಮೊದಲ ಸೋಲು ಕಂಡಿದ್ದಾರೆ.
ಒಟ್ಟಾರೆ ಟೆಸ್ಟ್ ಮತ್ತು ಏಕದಿನ ಸೇರಿದಂತೆ 20 ಪಂದ್ಯಗಳಲ್ಲಿ ಭಾರತ ತಂಡವನ್ನು ತವರಿನಲ್ಲಿ ಮುನ್ನಡೆಸಿರುವ ಕೊಹ್ಲಿ ಇದೇ ಮೊದಲ ಬಾರಿಗೆ ಸೋಲುಂಡಿದ್ದಾರೆ. ಅದೂ ಕೇವಲ 5 ರನ್ ಗಳ ಅಂತರದಲ್ಲಿ ಎನ್ನುವುದು ವಿಶೇಷ.
ಇದೇ ವೇಳೆ ನಾಯಕನಾಗಿ ಅತೀ ವೇಗದ 1000 ರನ್ ಪೂರೈಸಿದ ದಾಖಲೆಯನ್ನು ಕೊಹ್ಲಿ ಮಾಡಿದರು. ಅವರು ಕೇವಲ 17 ಇನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ಇದಕ್ಕಿಂತ ಮೊದಲು ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ 18 ಇನಿಂಗ್ಸ್ ಗಳಲ್ಲಿ ಮಾಡಿದ್ದು ದಾಖಲೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ