Select Your Language

Notifications

webdunia
webdunia
webdunia
webdunia

ಆರು ತಿಂಗಳ ಪ್ರಶಸ್ತಿ ಬರ ನೀಗಿಸಿಕೊಂಡ ಸೈನಾ ನೆಹ್ವಾಲ್

ಆರು ತಿಂಗಳ ಪ್ರಶಸ್ತಿ ಬರ ನೀಗಿಸಿಕೊಂಡ ಸೈನಾ ನೆಹ್ವಾಲ್
Malasya , ಸೋಮವಾರ, 23 ಜನವರಿ 2017 (08:50 IST)
ಮಲೇಷ್ಯಾ: ಮಾಜಿ ವಿಶ್ವ ನಂ.1 ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇತ್ತೀಚೆಗೆ ಗೆಲ್ಲುವುದೇ ಅಪರೂಪವಾಗಿಬಿಟ್ಟಿತು. ಅವರ ಕಾಲ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ.

 
ನಿನ್ನೆ ನಡೆದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.  ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತೆಯಾಗಿದ್ದ ಸೈನಾ ಥಾಯ್ಲೆಂಡ್ ನ ಪಾರ್ನ್ ಪಾವೀ ಚೊಚುವಾಂಗ್ ವಿರುದ್ಧ 22-20, 22-20 ಅಂತರದಿಂದ ಗೆಲುವು ದಾಖಲಿಸಿದರು.

ಉಭಯ ಆಟಗಾರ್ತಿಯರೂ ಗೆಲುವಿಗಾಗಿ ಪೈಪೋಟಿಯೊಡ್ಡಿದ್ದರು. ಒಂದು ಹಂತದಲ್ಲಿ ಸ್ಕೋರ್ ಸಮಬಲ ಸಾಧಿಸಿತ್ತು. ಆದರೆ ನಂತರ ಸೈನಾ ತಮ್ಮ ಅನುಭವದ ಧಾರೆಯೆರೆದು ಸತತ ಅಂಕ ಗಳಿಸುವ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಇದರೊಂದಿಗೆ ಕಳೆದ ಆರು ತಿಂಗಳಿನಿಂದ ಪ್ರಶಸ್ತಿ ಗೆಲ್ಲದೇ ಮಂಕು ಕವಿದಂತಿದ್ದ ಸೈನಾ ಶೈನ್ ಆದರು. ಕಳೆದ ಬಾರಿ ಜುಲೈನಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದೇ ಅವರ ಕೊನೆಯ ಪ್ರಶಸ್ತಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ಸಂಪೂರ್ಣ ಫಿಟ್, ಆದರೂ ಆಡುವುದು ಡೌಟ್