Select Your Language

Notifications

webdunia
webdunia
webdunia
webdunia

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ಇಷ್ಟೊಂದು ನಾಚಿಕೆನಾ: Video

Arjun Tendulkar
Photo Credit: X
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ಪಪ್ಪಾರಾಜಿಗಳನ್ನು ಕಂಡರೆ ಇಷ್ಟೊಂದು ನಾಚಿಕೆನಾ? ಭಯನಾ? ಅವರ ಲೇಟೆಸ್ಟ್ ವಿಡಿಯೋ ನೋಡಿ ನೆಟ್ಟಿಗರು ಹೀಗಂತ ಪ್ರಶ್ನೆ ಮಾಡುತ್ತಿದ್ದಾರೆ.

ಸಚಿನ್ ಪುತ್ರ ಅರ್ಜುನ್ ಐಪಿಎಲ್ ನಲ್ಲಿ ಲಕ್ನೋ ಪರ ಆಡುತ್ತಾರೆ. ತಂದೆಯಿಂದ ಕ್ರಿಕೆಟ್ ಬಳವಳಿಯಾಗಿ ಪಡೆದಿದ್ದರೂ ಸ್ವಂತ ಪರಿಶ್ರಮದಿಂದ ಬೆಳೆಯುತ್ತಿದ್ದಾರೆ. ಆದರೆ ಅಷ್ಟು ದೊಡ್ಡ ಕ್ರಿಕೆಟಿಗನ ಮಗನಾದರೂ ಎಲ್ಲೂ ದರ್ಪ ತೋರಿಸಿದವರೇ ಅಲ್ಲ.

ಇಂತಿಪ್ಪ ಅರ್ಜುನ್ ಪಪ್ಪಾರಾಜಿಗಳ ಎದುರು ಬರುವುದೇ ಕಡಿಮೆ. ಮಾಧ್ಯಮಗಳೊಂದಿಗೆ ಮಾತನಾಡಿದ್ದೂ ಅಪರೂಪ. ಕ್ಯಾಮರಾ ಕಂಡರೆ ಮಾರು ದೂರ ಓಡುವ ಅರ್ಜುನ್ ಈಗ ವಿಮಾನ ನಿಲ್ದಾಣದಲ್ಲಿ ಅದೇ ರೀತಿಯ ವರ್ತನೆ ತೋರಿದ್ದಾರೆ. ಇದಕ್ಕೆ ಅವರಿಗೆ ನಾಚಿಕೆನಾ? ಭಯಾನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಬರುವಾಗ ದೂರದಿಂದಲೇ ಪಪ್ಪಾರಾಜಿಗಳನ್ನು ನೋಡಿದ ಅರ್ಜುನ್ ಕೊಂಚ ಗಲಿಬಿಲಿಯಾಗಿದ್ದಾರೆ. ಬಳಿಕ ತಮ್ಮ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಯ ಹಿಂದೆ ಅಡಗಿಕೊಂಡು ಮುಂದೆ ನಡೆದಿದ್ದಾರೆ. ಕ್ಯಾಮರಾಗಳು ಹತ್ತಿರವಾಗುತ್ತಿದ್ದಂತೇ ಆತುರ ಆತುರವಾಗಿ ನಡೆದುಕೊಂಡು ತಮ್ಮ ಕಾರು ಸೇರಿಕೊಂಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

pic.twitter.com/gv1OcBCapp

 

— Aditya (@Warlock_Aditya) May 29, 2026

Share this Story:

Follow Webdunia kannada

ಮುಂದಿನ ಸುದ್ದಿ

ಯಾಕೆ ಹೀಗೆ ಮಾಡಿದೆ, ಎಲ್ಲರ ಎದುರೇ ವೈಭವ್ ಸೂರ್ಯವಂಶಿಗೆ ಬೈದ ರಿಯಾನ್ ಪರಾಗ್ Video