Select Your Language

Notifications

webdunia
webdunia
webdunia
webdunia

ನನಗೆ ಯಾರ ಅನುಕಂಪವೂ ಬೇಕಾಗಿಲ್ಲ ಎಂದ ಟೀಂ ಇಂಡಿಯಾ ಕ್ರಿಕೆಟಿಗ

ನನಗೆ ಯಾರ ಅನುಕಂಪವೂ ಬೇಕಾಗಿಲ್ಲ ಎಂದ ಟೀಂ ಇಂಡಿಯಾ ಕ್ರಿಕೆಟಿಗ
ಚೆನ್ನೈ , ಗುರುವಾರ, 22 ಮಾರ್ಚ್ 2018 (09:03 IST)
ಚೆನ್ನೈ: ಬಾಂಗ್ಲಾದೇಶ ವಿರುದ್ಧ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವು ಕೊಡಿಸದೇ ಇದ್ದಿದ್ದರೆ ಯುವ ಬ್ಯಾಟ್ಸ್ ಮನ್ ವಿಜಯ್ ಶಂಕರ್ ವಿಲನ್ ಆಗಬೇಕಾಗಿತ್ತು.

19 ಎಸೆತಗಳಿಂದ 17 ರನ್ ಗಳಿಸಿದ್ದ ವಿಜಯ್ ಹೆಚ್ಚೂ ಕಡಿಮೆ ಭಾರತವನ್ನು ಸೋಲಿನತ್ತ ದೂಡಿದ್ದರು. ಅವರ ಈ ನಿಧಾನಗತಿಯ ಇನಿಂಗ್ಸ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರೀ ಟೀಕೆ ಮಾಡಿದ್ದರು.

ಹೀಗಾಗಿ ವಿಜಯ್ ಕುಗ್ಗದಂತೆ ಕೆಲವರು ಅವರ ಮೊಬೈಲ್ ಗೆ ಸಂದೇಶ ಕಳುಹಿಸುತ್ತಿದ್ದರಂತೆ. ಆದರೆ ನನಗೆ ಇದರ ಅಗತ್ಯವಿಲ್ಲ ಎಂದಿದ್ದಾರೆ ವಿಜಯ್. ‘ನನ್ನ ಹೆತ್ತವರು, ಆಪ್ತ ಸ್ನೇಹಿತರಿಗೆ ನನ್ನ ಮನಸ್ಸಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿತ್ತು. ಹಾಗಾಗಿ ಅವರು ಯಾರೂ ಏನೂ ಹೇಳಿರಲಿಲ್ಲ. ಆದರೆ ಸಾಕಷ್ಟು ಜನ ಕುಗ್ಗಬೇಡ ಎಂದು ಸಂದೇಶ ಕಳುಹಿಸುತ್ತಿದ್ದರು. ವೃತ್ತಿ ಜೀವನದಲ್ಲಿ ಮುನ್ನಡೆಯಲು ಬಯಸುವಾಗ ನನಗೆ ಇಂತಹ ಅನುಕಂಪದ ಮಾತಿನ ಅಗತ್ಯವಿಲ್ಲ’ ಎಂದು ವಿಜಯ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ನಿಂದ ವಿರಾಟ್ ಕೊಹ್ಲಿ ಇಷ್ಟೊಂದು ಆದಾಯ ಬರುತ್ತೆ!