Daily Horoscope
✕

ಪಾಕಿಸ್ತಾನ ಕ್ರಿಕೆಟಿಗರನ್ನು ಹೀಗೆ ಶೇಪ್ ಔಟ್ ಮಾಡೋದಾ ಸೂರ್ಯಕುಮಾರ್ ಯಾದವ್ Video

Krishnaveni K
ಭಾನುವಾರ, 15 ಫೆಬ್ರವರಿ 2026 (16:33 IST)
Photo Credit: X
ಕೊಲೊಂಬೋ: ಪಾಕಿಸ್ತಾನ  ವಿರುದ್ಧ ಇಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಎದುರಾಳಿಗಳನ್ನು ಇನ್ನಿಲ್ಲದಂತೆ ರೋಸ್ಟ್ ಮಾಡಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸೂರ್ಯಕುಮಾರ್ ಯಾದವ್ ಗೆ ಈ ಬಾರಿ ನೀವು ಪಾಕಿಸ್ತಾನ ಆಟಗಾರರ ಕೈ ಕುಲುಕುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೂರ್ಯ 'ಇನ್ನೂ ಸಾಕಷ್ಟು ಸಮಯವಿದೆ. ಚೆನ್ನಾಗಿ ಊಟ ಮಾಡೋಣ, ನಿದ್ರೆ ಮಾಡೋಣ.. ಆಮೇಲೆ ಮುಂದಿನದ್ದು ನೋಡೋಣ’ ಎಂದು ರೋಸ್ಟ್ ಮಾಡಿದ್ದಾರೆ.

ಇನ್ನು, ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ‘ನಾವು ಅಭಿಷೇಕ್ ಶರ್ಮಾ ಆಡಲಿ ಎಂದೇ ಬಯಸುತ್ತೇವೆ. ನಾವು ಅತ್ಯುತ್ತಮ ಆಟಗಾರರನ್ನೇ ಎದುರಿಸಲು ಬಯಸುತ್ತೇವೆ’ ಎಂದಿದ್ದರು. ಅವರಿಗೆ ಟಾಂಗ್ ಕೊಟ್ಟ ಸೂರ್ಯ ‘ಒಂದು ವೇಳೆ ನಿಮಗೆ ಅಭಿಷೇಕ್ ಆಡಬೇಕು ಎನಿಸಿದರೆ ಅವರನ್ನು ಆಡಿಸೋಣ ಬಿಡಿ’ ಎಂದಿದ್ದಾರೆ.

ಇಷ್ಟಕ್ಕೇ ಸೂರ್ಯ ಸುಮ್ಮನಾಗಲಿಲ್ಲ. ಪತ್ರಕರ್ತರೊಬ್ಬರು ಪಾಕಿಸ್ತಾನ ಜೊತೆ ಉಭಯ ದೇಶದ ಕ್ರಿಕೆಟ್ ಸರಣಿ ಆಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೂರ್ಯ ‘ನಾನು ಈಗ ಇದನ್ನು ನಿರ್ಧರಿಸುವ ಸ್ಥಾನದಲ್ಲಿ ಇಲ್ಲ. ಒಂದು ವೇಳೆ ನಾನು ಆ ಸ್ಥಾನಕ್ಕೆ ಬಂದರೆ ಆಮೇಲೆ ನೋಡೋಣ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಭಾರತ ಹಾಗೂ ವೆಸ್ಟ್ ಇಂಡೀಸ್ T20 ಸರಣಿ ಆರಂಭ: ವೇಳಾಪಟ್ಟಿ, ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ತಲೆಯಲ್ಲಿ ಬುದ್ಧಿ ಇಲ್ವಾ… ವಿಮಾನ ನಿಲ್ದಾಣದಲ್ಲಿ ಸಿಟ್ಟಾದ ಕ್ರಿಕೆಟಿಗ ಇಶಾನ್ ಕಿಶನ್ video

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಆಯ್ಕೆ: ಟೀಮ್ ಇಂಡಿಯಾ ವೇಗದ ಪಡೆಗೆ ಬಿಗ್ ಬೂಸ್ಟ್

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಮುಂದಿನ ಸುದ್ದಿ
Show comments