Publish Date: Thu, 02 Jul 2026 (18:22 IST)
Updated Date: Thu, 02 Jul 2026 (18:25 IST)
ಮುಂಬೈ: ಟೀಂ ಇಂಡಿಯಾ ವಾಲ್ ಎಂದೇ ಜನಜನಿತವಾಗಿದ್ದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಕ್ಕಳು ಈಗ ಕಿರಿಯರ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಸಮಿತ್ ದ್ರಾವಿಡ್ ಬ್ಯಾಟಿಂಗ್ ನೋಡುತ್ತಿದ್ದರೆ ನಿಮಗೆ ಥೇಟ್ ರಾಹುಲ್ ದ್ರಾವಿಡ್ ರನ್ನು ನೋಡಿದಂತೇ ಆಗುತ್ತದೆ. ಆ ವಿಡಿಯೋ ಇಲ್ಲಿದೆ ನೋಡಿ.
ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ KSCA T20 2026 ಟೂರ್ನಿಯಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಮಿತ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜುಲೈ 1 ರಂದು ನಡೆದ ಹುಬ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪರ ಕಣಕ್ಕಿಳಿದಿದ್ದ ಸಮಿತ್, ಮೌನವಾಗಿ ಕ್ರೀಸ್ ಕಾಯುವ ತಮ್ಮ ತಂದೆಯ ಶೈಲಿಗಿಂತ ಸಂಪೂರ್ಣ ಭಿನ್ನವಾಗಿ 'ಮಿಸ್ಟರ್ 360 ಡಿಗ್ರಿ' ಅವತಾರವೆತ್ತಿ ಅಬ್ಬರಿಸಿದ್ದಾರೆ.
ಪಂದ್ಯದಲ್ಲಿ ಆರಂಭಿಕ ಆಘಾತದ ಬಳಿಕ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಮಿತ್ ದ್ರಾವಿಡ್, ಎದುರಿಸಿದ ಪ್ರತಿಯೊಬ್ಬ ಬೌಲರ್ ಮೇಲೂ ಸವಾರಿ ಮಾಡಿದರು. ಮೈದಾನದ ಎಲ್ಲಾ ದಿಕ್ಕುಗಳಿಗೂ ಮನಬಂದಂತೆ ಚೆಂಡನ್ನು ಅಟ್ಟಿದ ಅವರು ಕೇವಲ 23 ಎಸೆತಗಳಲ್ಲಿ 6 ಆಕರ್ಷಕ ಬೌಂಡರಿಗಳ ನೆರವಿನಿಂದ 32 ರನ್ ಚಚ್ಚಿದರು. ಅವರ ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಮೂಡಿಬಂದ ರಿವರ್ಸ್ ಸ್ವೀಪ್, ಕ್ಲಾಸ್ ಕಟ್ ಶಾಟ್‌ಗಳು ಮತ್ತು ಲಾಫ್ಟೆಡ್ ಡ್ರೈವ್‌ಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಮಿತ್ ಬ್ಯಾಟಿಂಗ್ ನೋಡುತ್ತಿದ್ದರೆ ತಂದೆಯ ಬ್ಯಾಟಿಂಗ್ ನೋಡುತ್ತಿದ್ದ ಹಾಗೇ ಆಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ