Video: ಬೌಲರ್ ಸುಸ್ತಾಗಿದ್ದಾನೆ ಓಡ್ಬೇಕಾಗಿತ್ತು..: ಸ್ಟಂಪ್ ಮೈಕ್ ನಲ್ಲಿ ಶ್ರೇಯಸ್ ಗೆ ಬೆಂಡೆತ್ತಿದ ರೋಹಿತ್

Krishnaveni K
ಗುರುವಾರ, 23 ಅಕ್ಟೋಬರ್ 2025 (14:20 IST)
Photo Credit: X

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ನಡೆದ ಸ್ವಾರಸ್ಯಕರ ಮಾತುಕತೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಭಾರತ ಸಂಕಷ್ಟದಲ್ಲಿದ್ದಾಗ ಇಬ್ಬರೂ ಉತ್ತಮ ಜೊತೆಯಾಟವಾಡಿ ಭಾರತಕ್ಕೆ ಗೌರವಯುತ ಮೊತ್ತ ಕಲೆ ಹಾಕಲು ನೆರವಾಗಿದ್ದರು. ಸಂಕಷ್ಟದ ಸಮಯದಲ್ಲಿ ಇಬ್ಬರೂ ಶತಕದ ಜೊತೆಯಾಟವಾಡಿದ್ದಾರೆ. ರೋಹಿತ್ 73 ರನ್ ಗಳಿಸಿದರೆ ಶ್ರೇಯಸ್ ಅಯ್ಯರ್ 61 ರನ್ ಗಳಿಸಿದರು.

ಒಂದು ಹಂತದಲ್ಲಿ ರೋಹಿತ್ ಶರ್ಮಾ ಬಾಲ್ ಹೊಡೆದು ಒಂಟಿ ರನ್ ಕದಿಯಲು ಮುಂದಾದರು. ಆದರೆ ಶ್ರೇಯಸ್ ಅಯ್ಯರ್ ಹಿಂದೇಟು ಹಾಕಿದರು. ಆಗ ರೋಹಿತ್ ‘ಅರೇ ಶ್ರೇಯಸ್ ರನ್ ಆಗಿ ಹೋಗುತ್ತಿತ್ತು’ ಎನ್ನುತ್ತಾರೆ. ಅದಕ್ಕೆ ಶ್ರೇಯಸ್ ‘ನೀವು ಮಾಡಿ ತೋರಿಸಿ, ಏನಾದರೂ ಆದರೆ ನನಗೆ ಹೇಳಬೇಡಿ ಮತ್ತೆ’ ಎನ್ನುತ್ತಾರೆ. ಅದಕ್ಕೆ ರೋಹಿತ್ ‘ನೀನು ಮುಂದೆ ಬರಬೇಕು. ಏಳು ಓವರ್ ಆಗಿದೆ, ಬೌಲರ್ ಸುಸ್ತಾಗಿದ್ದಾನೆ, ಓಡಬಹುದಿತ್ತು’ ಎನ್ನುತ್ತಾರೆ. ಇಬ್ಬರ ಸಂಭಾಷಣೆಯ ವಿಡಿಯೋ ಇಲ್ಲಿದೆ ನೋಡಿ.

 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ: ಪೋಷಕರ ತೀರ್ಮಾನವೇನು ಗೊತ್ತಾ

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುವಿನಲ್ಲಿ ಚಿಕಿತ್ಸೆ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವಾಗ ಇಲ್ಲಿದೆ ಡೀಟೈಲ್ಸ್

ಟೀಂ ಇಂಡಿಯಾಗೆ ಮತ್ತೆ ಶುರು ಹರ್ಷಿತ್ ರಾಣಾ ತಲೆನೋವು

Womens World Cup:ಧಾರಾಕಾರ ಮಳೆಗೆ ಕೊಚ್ಚಿ ಹೋದ ಭಾರತ–ಬಾಂಗ್ಲಾದೇಶ ಪಂದ್ಯ

ಮುಂದಿನ ಸುದ್ದಿ
Show comments