ವಿರಾಟ್ ಕೊಹ್ಲಿ ಶತಕಕ್ಕೆ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟವರು ಯಾರು ನೋಡಿ: Video

Krishnaveni K
ಭಾನುವಾರ, 30 ನವೆಂಬರ್ 2025 (17:26 IST)
Photo Credit: X
ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದಾಗ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟವರು ಯಾರು ಎಂದು ಈ ವಿಡಿಯೋ ನೋಡಿದರೇ ಗೊತ್ತಾಗುತ್ತದೆ.

ವಿರಾಟ್ ಕೊಹ್ಲಿ ಇಂದು ಶತಕ ಗಳಿಸಿದಾಗ ಇಡೀ ಮೈದಾನವೇ ಎದ್ದು ನಿಂತು ಗೌರವಿಸಿತ್ತು. ಕೋಟ್ಯಾಂತರ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟಿದ್ದು ರೋಹಿತ್ ಶರ್ಮಾ.

ಪೆವಿಲಿಯನ್ ನಲ್ಲಿ ಕೂತು ಕೊಹ್ಲಿ ಬ್ಯಾಟಿಂಗ್ ವೀಕ್ಷಿಸುತ್ತಿದ್ದ ರೋಹಿತ್ ಶತಕ ದಾಖಲಾಗುತ್ತಿದ್ದಂತೇ ಎದ್ದು ನಿಂತು ಆಕ್ರಮಣಕಾರಿಯಾಗಿ ಶಹಬ್ಬಾಶ್ ಎನ್ನುವ ಮೂಲಕ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಅವರ ಅಗ್ರೆಸಿವ್ ಸೆಲೆಬ್ರೇಷನ್ ನೋಡಿ ಪಕ್ಕದಲ್ಲಿದ್ದ ಅರ್ಷ್ ದೀಪ್ ಸಿಂಗ್ ಕೂಡಾ ಅರೆಕ್ಷಣ ಅವಾಕ್ಕಾದರು.

ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ಮತ್ತು ಕೊಹ್ಲಿಯನ್ನು ವಯಸ್ಸಾಯ್ತು ಎಂದು ತಂಡದಿಂದ ಹೊರಹಾಕುವ ಪ್ರಯತ್ನಗಳು ನಡೆಯುತ್ತಲೇ ಇದೆ. ಆದರೆ ಇದೆಲ್ಲದಕ್ಕೂ ಈ ಇಬ್ಬರೂ ದಿಗ್ಗಜರು ತಮ್ಮ ಆಟದ ಮೂಲಕ ಉತ್ತರ ನೀಡುತ್ತಿದ್ದಾರೆ. ಇಂದು ವಿರಾಟ್ ಕೊಹ್ಲಿ 135 ರನ್ ಸಿಡಿಸಿದರೆ, ರೋಹಿತ್ 57 ರನ್ ಗಳಿಸಿದ್ದರು. ಇಬ್ಬರೂ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವನ್ನೂ ಆಡಿದ್ದರು. ಕೊಹ್ಲಿಗೆ ಇದು 83 ನೇ ಅಂತಾರಾಷ್ಟ್ರೀಯ ಶತಕವಾಗಿದ್ದರೆ ರೋಹಿತ್ ಗೆ 60 ನೇ ಅರ್ಧಶತಕವಾಗಿತ್ತು. ಭಾರತ 50 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS SA: ಅಬ್ಬರಿಸಿದ ವಿರಾಟ್ ಕೊಹ್ಲಿ, ಸೌತ್‌ ಆಫ್ರಿಕಾಗೆ ಬಿಗ್‌ ಟಾರ್ಗೇಟ್

ವಿರಾಟ್ ಕೊಹ್ಲಿ ಶತಕಕ್ಕೆ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟವರು ಯಾರು ನೋಡಿ: Video

IND VS SA: ಕಿಂಗ್ ಕೊಹ್ಲಿ ಶತಕ ಬಾರಿಸುತ್ತಿದ್ದಂತ್ತೆ ಮೈದಾನಕ್ಕೆ ನುಗ್ಗಿದ ಅಭಿಮಾನಿ, ಮಾಡಿದ್ದೇನು ನೋಡಿ Video

IND vs SA Odi:ಮತ್ತೆ ಟಾಸ್‌ ಸೋತ ಟೀಂ ಇಂಡಿಯಾ: ಕನ್ನಡಿಗ ರಾಹುಲ್‌ ನಾಯಕತ್ವಕ್ಕೆ ಸತ್ವಪರೀಕ್ಷೆ

ಮತ್ತೇ ಒಂದಾಗುತ್ತಾರಾ ಪಲಾಶ್‌, ಸ್ಮೃತಿ ಮಂಧಾನ, ಕುತೂಹಲ ಮೂಡಿಸಿದ ಮಂದಾನ, ಪಲಾಶ್‌ ನಡೆ

ಮುಂದಿನ ಸುದ್ದಿ
Show comments