Select Your Language

Notifications

webdunia
webdunia
webdunia
webdunia

28ನೇ ವಯಸ್ಸಿಗೆ ಕ್ರಿಕೆಟ್ ಗೆ ವಿದಾಯ ಹೇಳಿದ ಉನ್ ಮುಖ್ತ್ ಚಾಂದ್!

unmukth chand
bengaluru , ಶನಿವಾರ, 14 ಆಗಸ್ಟ್ 2021 (21:27 IST)

19 ವರ್ಷದೊಳಗಿನವರ 2012ರ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಉನ್ ಮುಖ್ತ್ ಚಾಂದ್ 28ನೇ ವಯಸ್ಸಿಗೆ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಫೈನಲ್ ನಲ್ಲಿ ಉನ್ ಮುಖ್ತ್ ಚಾಂದ್ ಅಜೇಯ 111 ರನ್ ಬಾರಿಸಿ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಆದರೆ ದಿಢೀರನೆ ಕ್ರಿಕೆಟ್ ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಬಿಸಿಸಿಐಗೆ ಪತ್ರ ಬರೆದಿರುವ ಬಗ್ಗೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಉನ್ ಮುಖ್ತ್ ಚಾಂದ್, ನಾನಿನ್ನು ಸ್ಪಷ್ಟವಾಗಿ ವಿದಾಯಕ್ಕೆ ಕಾರಣ ಹುಡುಕುತ್ತಿದ್ದೇನೆ. ಆದರೆ ಇನ್ನು ಮುಂದೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗುವುದಿಲ್ಲ ಎಂದು ನೆನೆದಾಗ ಎದೆ ಬಡಿತ ನಿಂತಂತೆ ಆಗುತ್ತದೆ. ಭವಿಷ್ಯದಲ್ಲಿ ಜಗತ್ತಿನಾದ್ಯಂತ ಒಳ್ಳೆಯ ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಚಾಂದ್ 67 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 31.57ರ ಸರಾಸರಿಯಲ್ಲಿ 3379 ರನ್ ಗಳಿಸಿದ್ದಾರೆ. 120 ಎ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 4505 ರನ್ ಗಳಿಸಿದ್ದು, 77 ಟಿ-20 ಪಂದ್ಯದಲ್ಲಿ 1565 ರನ್ ಗಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೆಹ್ವಾಗ್ ಶತಕದ ದಾಖಲೆ ಮುರಿದ ಕೆ.ಎಲ್ ರಾಹುಲ್!