Publish Date: Tue, 26 Jun 2018 (09:20 IST)
Updated Date: Tue, 26 Jun 2018 (09:21 IST)
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪಂದ್ಯಗಳು ಮ್ಯಾಚ್ ಫಿಕ್ಸಿಂಗ್ ಬುಕಿಗಳ ಪ್ರಿಯವಾದ ಪಂದ್ಯವಾಗಿರುತ್ತದೆ. ಇಂತಹದ್ದೊಂದು ಪಂದ್ಯವನ್ನು ಫಿಕ್ಸ್ ಮಾಡಲು ತನಗೆ ಭಾರೀ ಮೊತ್ತದ ಹಣದ ಅಮಿಷ ಒಡ್ಡಲಾಗಿತ್ತು ಎಂದು ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಹೇಳಿಕೊಂಡಿದ್ದಾರೆ.
ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಎರಡು ಬಾಲ್ ಗಳನ್ನು ಆಡದೇ ಬಿಟ್ಟರೆ 200,000 ಡಾಲರ್ ಹಣ ನೀಡುವುದಾಗಿ ನನಗೆ ಅಮಿಷವೊಡ್ಡಿದ್ದರು ಎಂದು ಟಿವಿ ಸಂದರ್ಶನವೊಂದರಲ್ಲಿ ಉಮರ್ ಹೇಳಿಕೊಂಡಿದ್ದಾರೆ.
ಉಮರ್ ಈ ಹೇಳಿಕೆ ನೀಡುತ್ತಿದ್ದಂತೆ ಪಾಕ್ ಕ್ರಿಕೆಟ್ ಸಂಸ್ಥೆಯ ಭ್ರಷ್ಟಾಚಾರ ನಿಗ್ರಹ ಪಡೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಒಂದು ವೇಳೆ ಉಮರ್ ಹೇಳಿದ್ದು ಸುಳ್ಳು ಎಂದು ಸಾಬೀತಾದರೆ ಅವರ ಭವಿಷ್ಯಕ್ಕೇ ಮಾರಕವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.