ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

Sampriya
ಮಂಗಳವಾರ, 8 ಜುಲೈ 2025 (14:20 IST)
Photo Credit X
ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗದ ಬೌಲರ್‌ ಯಶ್‌ ದಯಾಳ್‌ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪವು ಅವರ ವೃತ್ತಿಭವಿಷ್ಯಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. 

ಎಡಗೈ ವೇಗಿ ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಈ ಸಂಬಂಧ ಉತ್ತರ ಪ್ರದೇಶದ ಗಾಝಿಯಾಬಾದ್​ ಠಾಣೆಯಲ್ಲಿ ದಯಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತ ಎಫ್​ಐಆರ್​ ದಾಖಲಾಗಿರುವ ಕಾರಣ ಯಶ್ ದಯಾಳ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.‌

ಮದುವೆಯ ಆಮಿಷವೊಡ್ಡಿ ಯಶ್ ದಯಾಳ್ ಅವರು  ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಇತ್ತೀಚೆಗಷ್ಟೇ ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು. ಅಷ್ಟೇ ಅಲ್ಲದೆ ಈ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಪತ್ರ ಬರೆದಿದ್ದರು. ಸಿಎಂ ಕಚೇರಿ ಸೂಚನೆ ಮೇರೆಗೆ ಪೊಲೀಸರು ದಯಾಳ್ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.


ದಯಾಳ್ ಅವರ ಮಾಜಿ ಪ್ರಿಯತಮೆ ಎನ್ನಲಾದ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾರೆ. ದಯಾಳ್ ಮತ್ತು ನಾನು ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಈ ಅವಧಿಯಲ್ಲಿ ದಯಾಳ್, ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಈಗ ದೂರ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದ ಪೊಲೀಸರು, ಇದೀಗ ದಯಾಳ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಇದರಿಂದ ದಯಾಳ್​​ಗೆ ಬಂಧನದ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದರೂ ಆರ್​ಸಿಬಿ ಸ್ಟಾರ್ ಯಶ್​​, ಬಂಧನ ಆಗಬಹುದು.  

ಲೈಂಗಿನ ದೌರ್ಜನ್ಯದಂತಹ ಗಂಭೀರ ಪ್ರಕರಣವನ್ನು ಎದುರಿಸುತ್ತಿರುವ ಆಟಗಾರನನ್ನು ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ

ಮದುವೆ ಮುರಿದಿದ್ದಕ್ಕೆ ಕುಗ್ಗಿದ್ದಾರಾ ಸ್ಮೃತಿ ಮಂಧಾನ: ಒಂದೇ ಸಾಲಿನಲ್ಲಿ ಕೊಟ್ರು ಉತ್ತರ

IND vs SA: ಇಂದಿನ ಪಂದ್ಯಕ್ಕೂ ಕಳಪೆ ಫಾರ್ಮ್ ನಲ್ಲಿರುವ ಈ ಆಟಗಾರನಿಗೆ ಮತ್ತೊಂದು ಚಾನ್ಸ್ ಪಕ್ಕಾ

ಮುಂದಿನ ಸುದ್ದಿ