Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆರಾಯನ ಕಾಟ, ಡ್ರಾ ಘೋಷಣೆ

ab de villiers
ಜೋಹಾನ್ಸ್‌‍ಬರ್ಗ್: , ಸೋಮವಾರ, 20 ಜೂನ್ 2016 (18:48 IST)
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಳನೇ ತ್ರಿಕೋನ ಏಕದಿನ ಸರಣಿಯ ಪಂದ್ಯವನ್ನು ಮಳೆರಾಯನ ಕಾಟದಿಂದ ಯಾವುದೇ ಫಲಿತಾಂಶವಿಲ್ಲ ಎಂದು ಘೋಷಿಸಲಾಗಿದೆ.  ಸತತವಾಗಿ ಬಿದ್ದ ಮಳೆಯಿಂದ ಮೈದಾನ ತೇವವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಒಂದು ಓವರ್ ಪೂರೈಸಿದ್ದಾಗ ಪಂದ್ಯ ಡ್ರಾ ಎಂದು ಡಿಕ್ಲೇರ್ ಮಾಡಲಾಯಿತು. ಇದು ಎಬಿ ಡಿವಿಲಿಯರ್ಸ್ ಅವರ 200ನೇ ಏಕದಿನ ಪಂದ್ಯವಾಗಿತ್ತು.
 
ಎರಡೂ ತಂಡಗಳು ತಲಾ 2 ಪಾಯಿಂಟ್‌ಗಳನ್ನು ಗಳಿಸಿದವು. ದಕ್ಷಿಣ ಆಫ್ರಿಕಾ 12 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿಯನ್ನರು 11 ಪಾಯಿಂಟ್ ಗಳಿಸಿದ್ದಾರೆ.

 ಆತಿಥೇಯ ವೆಸ್ಟ್ ಇಂಡೀಸ್ ನಾಲ್ಕು ಪಂದ್ಯಗಳಲ್ಲಿ 8 ಪಾಯಿಂಟ್ ಗಳಿಸಿದ್ದು, ಇದೇ ಮೈದಾನದಲ್ಲಿ ಮಂಗಳವಾರ ಆಸ್ಟ್ರೇಲಿಯಾವನ್ನು ಎದುರಿಸಲಿದೆ.  ಇದೇ ಮೈದಾನದಲ್ಲಿ ಜೂನ್ 26ರಂದು ರೌಂಡ್ ರಾಬಿನ್ ಹಂತದ ಅಗ್ರಸ್ಥಾನದ ಎರಡು ತಂಡಗಳು ಫೈನಲ್ಸ್ ಆಡಲಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬುಮ್ರಾ, ಸ್ರಾನ್ ಮಾರಕ ದಾಳಿಗೆ ಜಿಂಬಾಬ್ವೆ 99 ರನ್‌ಗೆ 9 ವಿಕೆಟ್