Select Your Language

Notifications

webdunia
webdunia
webdunia
webdunia

ಬುಮ್ರಾ, ಸ್ರಾನ್ ಮಾರಕ ದಾಳಿಗೆ ಜಿಂಬಾಬ್ವೆ 99 ರನ್‌ಗೆ 9 ವಿಕೆಟ್

bumra
ಹರಾರೆ: , ಸೋಮವಾರ, 20 ಜೂನ್ 2016 (18:07 IST)
ಜಿಂಬಾಬ್ವೆ ವಿರುದ್ಧ ಮೊದಲ ಟಿ 20 ಪಂದ್ಯದಲ್ಲಿ ಕೇವಲ 2 ರನ್ ಅಂತರದಿಂದ ಸೋತಿದ್ದ ಭಾರತ ತಂಡ 2ನೇ ಟಿ ಟ್ವೆಂಟಿಯಲ್ಲಿ ಜಿಂಬಾಬ್ವೆ ತಂಡವನ್ನು 9 ವಿಕೆಟ್‌ಗೆ 99 ರನ್ ಅಲ್ಪ ಮೊತ್ತಕ್ಕೆ ಔಟ್ ಮಾಡುವ ಮೂಲಕ 1-1 ಸಮಮಾಡಿಕೊಂಡು ಸೇಡು ತೀರಿಸಿಕೊಳ್ಳುವ ಹಾದಿಯಲ್ಲಿದೆ.

ಬರೀಂದರ್ ಸ್ರಾನ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿ ಪೆವಿಲಿಯನ್ ಮಾರ್ಚ್‌ಫಾಸ್ಟ್ ಮಾಡಿದರು. ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರೆ, ಬರೀಂದರ್ ಸ್ರಾನ್  4 ವಿಕೆಟ್ ಕಬಳಿಸಿದರು.

ಸ್ರಾನ್ ಮತ್ತು ಬುಮ್ರಾ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಮಾಡಿದ್ದು, ಸ್ರಾನ್ ನಾಲ್ಕು ಓವರುಗಳಲ್ಲಿ ಕೇವಲ 10 ರನ್ ನೀಡಿದ್ದರೆ, ಬುಮ್ರಾ 4 ಓವರುಗಳಲ್ಲಿ 11 ರನ್ ಮಾತ್ರ ನೀಡಿದ್ದಾರೆ.  ಬರೀಂದರ್ ಅವರ ಮಾರಕ ದಾಳಿಗೆ ಆರಂಭದಲ್ಲೇ ಚಿಬಾಬಾ, ಮಸಕಾಡ್ಜಾ,  ಸಿಕಂದರ್ ರಾಜಾ, ಮುಂಟೋಂಬೋಡ್ಜಿ  ಔಟಾದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಸುಗೆಂಪು ಚೆಂಡಿನ ಹಗಲು ರಾತ್ರಿ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಶಮಿ