Select Your Language

Notifications

webdunia
webdunia
webdunia
webdunia

ನಸುಗೆಂಪು ಚೆಂಡಿನ ಹಗಲು ರಾತ್ರಿ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಶಮಿ

shami
ಕೋಲ್ಕತಾ , ಸೋಮವಾರ, 20 ಜೂನ್ 2016 (17:25 IST)
ಮೋಹನ್ ಬಾಗನ್ ವೇಗಿ ಮೊಹಮ್ಮದ್ ಶಮಿ ನಸುಗೆಂಪು ಚೆಂಡಿನಿಂದ ಸ್ಮರಣೀಯ ಚಮತ್ಕಾರ ಮಾಡಿದ್ದು, 42 ರನ್‌ಗೆ 5 ವಿಕೆಟ್ ಕಬಳಿಸಿದ್ದಾರೆ.  ಅವರ ಉತ್ತಮ ಪ್ರಯತ್ನದಿಂದ ಬಾಗನ್ ತಂಡವು ಎಡೆನ್‌ಗಾರ್ಡನ್ಸ್ ಮೈದಾನದಲ್ಲಿ ಎರಡನೇ ದಿನವಾದ ಇಂದು ಸಿಎಬಿ ಸೂಪರ್ ಲೀಗ್ ಫೈನಲ್‌ನಲ್ಲಿ  ಬೋವಾನಿಪೋರ್ ಕ್ಲಬ್ ತಂಡವನ್ನು  133 ರನ್‌ಗಳಿಗೆ ಆಲೌಟ್ ಮಾಡಲು ಸಾಧ್ಯವಾಗಿದೆ.

2015ರ ವಿಶ್ವಕಪ್ ಬಳಿಕ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿ ಫಿಟ್ ಆಗಿ ಕಂಡಿದ್ದು, ಬಿರುಸಿನಿಂದ ಬೌಲ್ ಮಾಡಿದರು. ಅವರ ಹೊಸ ಚೆಂಡಿನ ಜತೆಗಾರ ಸಂಜಿಬ್ ಸನ್ಯಾಲ್ ಸ್ವಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದ್ದರೆ, ಶಮಿ ವಿರೋಧಿ ಬ್ಯಾಟ್ಸ್‌ಮನ್‌ನನ್ನು ತೊಂದರೆ ಮಾಡಲು ಪೇಸ್ ಮತ್ತು ಬೌನ್ಸ್ ಮಾಡಿದರು.
 
ಬಾಗನ್ ವೇಗಿಗಳಿಂದ ಬೊವಾನಿಪುರ್ ಒಂದು ಹಂತದಲ್ಲಿ 45ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಆಂಶಿಕವಾಗಿ ಚೇತರಿಸಿಕೊಂಡು 153ಕ್ಕೆ ಆಲೌಟ್ ಆಗಿದೆ. ಮೋಹನ್ ಬಾಗನ್ ಮೊದಲ ಇನ್ನಿಂಗ್ಸ್‌ನಲ್ಲಿ 299 ರನ್ ಸ್ಕೋರ್ ಮಾಡಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕ್ರಿಕೆಟ್ ತಂಡದ ಸದಸ್ಯನಿಂದ ಅತ್ಯಾಚಾರ; ಆರೋಪದಲ್ಲಿ ಹುರುಳಿಲ್ಲ: ಠಾಕುರ್