Select Your Language

Notifications

webdunia
webdunia
webdunia
webdunia

ನಾಳೆ ಐಪಿಎಲ್ ಹರಾಜು: ಈ ಆಟಗಾರರ ಮೇಲೇ ಎಲ್ಲರ ಕಣ್ಣು!

ನಾಳೆ ಐಪಿಎಲ್ ಹರಾಜು: ಈ ಆಟಗಾರರ ಮೇಲೇ ಎಲ್ಲರ ಕಣ್ಣು!
Bangalore , ಭಾನುವಾರ, 19 ಫೆಬ್ರವರಿ 2017 (04:12 IST)
ಬೆಂಗಳೂರು: ನಾಳೆ ಈ ಬಾರಿಯ ಐಪಿಎಲ್ ಕೂಟದಲ್ಲಿ ಆಡಲಿರುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕೆಲವು ಆಟಗಾರರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.


 
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ದೇಶ ಮತ್ತು ವಿದೇಶದ ಆಟಗಾರರು ವಿವಿಧ ಫ್ರಾಂಚೈಸಿಗಳ ಪಾಲಾಗಲಿದ್ದಾರೆ. ಈ ಬಾರಿ ಯಾರು ಹೆಚ್ಚು ಮೊತ್ತ ಪಡೆಯುತ್ತಾರೆ, ಯಾವ ಆಟಗಾರ ಯಾವ ತಂಡದ ಪಾಲಾಗುತ್ತಾರೆ ಎನ್ನುವ ಸಹಜ ಕುತೂಹಲ ಅಭಿಮಾನಿಗಳಲ್ಲಿದೆ.

ಮುಖ್ಯವಾಗಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ ಮುಂಚೂಣಿಯಲ್ಲಿದ್ದಾರೆ. 2 ಕೋಟಿ ರೂ. ಮೂಲಧನ ಹೊಂದಿರುವ ಸ್ಟೋಕ್ಸ್ ಕೊಳ್ಳಲು ಹಲವು ಫ್ರಾಂಚೈಸಿಗಳು ಉತ್ಸಾಹ ತೋರಿವೆ. ಅದೇ ರೀತಿ ಇಷ್ಟೇ ಮೂಲಧನ ಹೊಂದಿರುವ ಇಶಾಂತ್ ಶರ್ಮಾ, ಇಂಗ್ಲೆಂಡ್ ನ ಇಯಾನ್ ಮಾರ್ಗನ್, 50 ಲಕ್ಷ ಮೂಲಧನ ಹೊಂದಿರುವ ಅಫ್ಘಾನಿಸ್ತಾನದ ಮೊಹಮ್ಮದ್ ಶಹಜಾದ್, ಟಿಮಲ್ ಮಿಲ್ಸ್ ಕೊಳ್ಳಲು ಫ್ರಾಂಚೈಸಿಗಳು ಮುಂದೆ ಬರುವ ಸಾಧ್ಯತೆಯಿದೆ. ಯಾವ ತಂಡ ಯಾರ ಪಾಲಾಗುತ್ತಾನೆ ಎಂದು ನೋಡಲು ನಾಳೆಯವರೆಗೆ ಕಾಯಲೇ ಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಹೊಸ ಬಾಸ್ ಗೆ ಮನವಿ ಸಲ್ಲಿಸಲಿರುವ ಎಸ್. ಶ್ರೀಶಾಂತ್