ರೋಹಿತ್ ಶರ್ಮಾ ಮಗಳಿಗಾಗಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದ ತಿಲಕ್ ವರ್ಮ

Webdunia
ಸೋಮವಾರ, 7 ಆಗಸ್ಟ್ 2023 (08:40 IST)
Photo Courtesy: Twitter
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅರ್ಧಶತಕ ಸಿಡಿಸಿದ ತಿಲಕ್ ವರ್ಮ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

ತಿಲಕ್ ವರ್ಮ ನಿನ್ನೆಯ ಪಂದ್ಯದಲ್ಲಿ 41 ಎಸೆತಗಳಿಂದ 51 ರನ್ ಗಳಿಸಿದರು. ಇದು ಅವರ ಚೊಚ್ಚಲ ಅರ್ಧಶತಕವಾಗಿತ್ತು. ಎರಡನೇ ಪಂದ್ಯದಲ್ಲೇ ತಿಲಕ್ ವರ್ಮ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಅರ್ಧಶತಕ ಸಿಡಿಸಿದ ಬಳಿಕ ತಿಲಕ್ ವರ್ಮ ಚಿಕ್ಕಮಗುವಿನಂತೆ ಕುಣಿದಾಡಿ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣ ರೋಹಿತ್ ಶರ್ಮಾ ಮಗಳು ಸಮೈರಾ. ತಿಲಕ್ ವರ್ಮ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕರೂ ಆಗಿರುವ ರೋಹಿತ್ ಶರ್ಮಾ ಮಗಳ ಜೊತೆ ಅವರಿಗೆ ಉತ್ತಮ ಒಡನಾಟವಿದೆ. ಈ ವೇಳೆ ತಾನು ಅರ್ಧಶತಕ ಅಥವಾ ಶತಕ ಸಿಡಿಸಿದರೆ ಈ ರೀತಿ ಸಂಭ್ರಮಿಸುವುದಾಗಿ ಸಮೈರಾಗೆ ಪ್ರಾಮಿಸ್ ಮಾಡಿದ್ದರಂತೆ. ಆ ಪ್ರಾಮಿಸ್ ಉಳಿಸಲು ತಿಲಕ್ ಈ ರೀತಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಈ ಅರ್ಧಶತಕವನ್ನು ಸಮೈರಾಗೆ ಅರ್ಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Betting Case: ಸುರೇಶ್ ರೈನಾ, ಶಿಖರ್ ಧವನ್ ಮುಟ್ಟುಗೋಲಾದ ಆಸ್ತಿಯೆಷ್ಟು ಗೊತ್ತಾ

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಐಪಿಎಲ್ 2026: ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ಮುಂದಿನ ಸುದ್ದಿ
Show comments