Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಸೋಲಿಗೆ ಈ ಆಟಗಾರರೇ ಕಾರಣ!

ಟೀಂ ಇಂಡಿಯಾ ಸೋಲಿಗೆ ಈ ಆಟಗಾರರೇ ಕಾರಣ!
ರಾಂಚಿ , ಶನಿವಾರ, 9 ಮಾರ್ಚ್ 2019 (09:01 IST)
ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್ ಗಳ ಸೋಲುಂಡಿದೆ.


ಒಂದು ವೇಳೆ ನಿನ್ನೆ ಪಂದ್ಯ ಗೆದ್ದಿದ್ದರೆ ಟೀಂ ಇಂಡಿಯಾ ನಿನ್ನೆಯೇ ಸರಣಿ ಗೆಲುವು ಕಾಣುತ್ತಿತ್ತು. ಆದರೆ ಧೋನಿ ತವರೂರಿನಲ್ಲಿ ಸೋಲುವ ಮೂಲಕ ಕನಸು ನುಚ್ಚುನೂರಾಯ್ತು.

ಆಸ್ಟ್ರೇಲಿಯಾ ನೀಡಿದ 314 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ 48.2 ಓವರ್ ಗಳಲ್ಲಿ 281 ರನ್ ಗಳಿಗೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಅಬ್ಬರದ ಇನಿಂಗ್ಸ್ ಆಡಿ 95 ಎಸೆತಗಳಲ್ಲಿ 123 ರನ್ ಗಳಿಸಿದರು. ಆದರೆ ಅವರಿಗೆ ಉಳಿದ ಯಾವುದೇ ಆಟಗಾರರೂ ಸಾಥ್ ನೀಡದೇ ಇದ್ದಿದ್ದರಿಂದ ಟೀಂ ಇಂಡಿಯಾ ಸೋತು ಹೋಯಿತು.

ಅದರಲ್ಲೂ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದು, ಆರಂಭಿಕರು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು. ರೋಹಿತ್ ಶರ್ಮಾ 14 ಕ್ಕೆ ವಿಕೆಟ್ ಒಪ್ಪಿಸಿದರೆ, ಧವನ್ ಕೊಡುಗೆ ಕೇವಲ 1 ರನ್. ಇನ್ನು, ತವರಿನಲ್ಲಾದರೂ ಧೋನಿ ಮ್ಯಾಜಿಕ್ ಮಾಡಬಹುದು ಎಂದು ಕಾದಿದ್ದವರಿಗೆ ನಿಧಾನಗತಿಯ ಇನಿಂಗ್ಸ್ ಆಡಿ (42 ಎಸೆತಗಳಲ್ಲಿ 26 ರನ್) ವಿಲನ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಅಂಬಟಿ ರಾಯುಡು ಕೊಹ್ಲಿಗೆ ಸಾಥ್ ನೀಡಿದ್ದರೆ ಫಲಿತಾಂಶವೇ ಬೇರೆಯದಾಗುತ್ತಿತ್ತು. ಆದರೆ ಅವರು ಎರಡೇ ರನ್ ಗಳಿಗೆ ಗಂಟು ಮೂಟೆ ಕಟ್ಟಿದರು.

ಈ ಎಲ್ಲಾ ಆಟಗಾರರ ಕಳಪೆ ಪ್ರದರ್ಶನದ ಜತೆಗೆ ಬೌಲರ್ ಗಳೂ ಎದುರಾಳಿಗಳನ್ನು ನಿಯಂತ್ರಿಸದೇ ಹೋಗಿದ್ದು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಂಚಿಯಲ್ಲಿ ಟೀಂ ಇಂಡಿಯಾ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿದ ಆಸ್ಟ್ರೇಲಿಯಾ