Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಗೆ ಪ್ರಮೋಷನ್, ಶಿಖರ್ ಧವನ್ ಗೆ ಡಿಮೋಷನ್!

ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಗೆ ಪ್ರಮೋಷನ್, ಶಿಖರ್ ಧವನ್ ಗೆ ಡಿಮೋಷನ್!
ಮುಂಬೈ , ಶುಕ್ರವಾರ, 8 ಮಾರ್ಚ್ 2019 (09:33 IST)
ಮುಂಬೈ: ಬಿಸಿಸಿಐ ಹೊಸದಾಗಿ ಕ್ರಿಕೆಟಿಗರ ವೇತನ ಗುತ್ತಿಗೆ ಪಟ್ಟಿ ಬಿಡುಗಡೆ ಮಾಡಿದ್ದು, ಯವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ಎ ದರ್ಜೆಗೆ ಪ್ರಮೋಷನ್ ನೀಡಿದರೆ, ಶಿಖರ್ ಧವನ್ ಗೆ ಡಿಮೋಷನ್ ನೀಡಿದೆ.


ಇಂಗ್ಲೆಂಡ್ ನಲ್ಲಿ ಟೆಸ್ಟ್ ಶತಕ ಗಳಿಸಿದ ಬಳಿಕ ಭಾರೀ ಫೇಮಸ್ಸಾದ ರಿಷಬ್ ಪಂತ್ ಇದೀಗ ಸೀಮಿತ ಓವರ್ ಗಳ ತಂಡದಲ್ಲೂ ಸ್ಥಿರವಾಗಿ ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ಅವರನ್ನು ಎ ದರ್ಜೆಯ ಗುತ್ತಿಗೆ ನೀಡಲಾಗಿದೆ.

ಆದರೆ ಆಗಾಗ ಫಾರ್ಮ್ ನಿಂದಾಗಿ ತಂಡದಿಂದ ಸ್ಥಾನ ಕಳೆದುಕೊಳ್ಳುವ ಶಿಖರ್ ಧವನ್ ಮತ್ತು ಟೆಸ್ಟ್ ತಂಡದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಭುವನೇಶ್ವರ್ ಕುಮಾರ್ ಗೆ ಈ ಮೊದಲು ಇದ್ದ ಎ ಪ್ಲಸ್ ದರ್ಜೆಯಿಂದ ಎ ದರ್ಜೆಗೆ ಡಿಮೋಷನ್ ನೀಡಲಾಗಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಎ ಪ್ಲಸ್ ದರ್ಜೆಯ ಕ್ರಿಕೆಟಿಗರಾಗಿದ್ದಾರೆ. ಇವರಿಗೆ 7 ಕೋಟಿ ವೇತನವಿದೆ. ಇನ್ನು, ಧೋನಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಬ್ ಪಂತ್ ಎ ದರ್ಜೆಯಲ್ಲಿ ಸ್ಥಾನ ಪಡೆದಿದ್ದು, ಇವರಿಗೆ 5 ಕೋಟಿ ವೇತನ ಸಿಗಲಿದೆ.

ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯಗೆ ಬಿ ದರ್ಜೆಯ ಗುತ್ತಿಗೆ ನೀಡಲಾಗಿದ್ದು, ಇವರಿಗೆ 3 ಕೋಟಿ ವೇತನವಿದೆ. ಉಳಿದಂತೆ ಭಾರತ ತಂಡದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ದಿನೇಶ್ ಕಾರ್ತಿಕ್, ವೃದ್ಧಿಮಾನ್ ಸಹಾ, ಕೇದಾರ್ ಜಾಧವ್, ಮನೀಶ್ ಪಾಂಡೆ, ಹನುಮ ವಿಹಾರಿ, ಅಂಬಟಿ ರಾಯುಡು, ಖಲೀಲ್ ಅಹಮ್ಮದ್ ಗೆ ಸಿ ದರ್ಜೆ ಗುತ್ತಿಗೆ ನೀಡಲಾಗಿದ್ದು, 1 ಕೋಟಿ ವೇತನ ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯೋ.. ಫಿಟ್ನೆಸ್ ಮನೆ ಹಾಳಾಗೋಯ್ತು..! ಧೋನಿ ಪತ್ನಿ ಮೇಲೆ ಕ್ರಿಕೆಟಿಗ ರಿಷಬ್ ಪಂತ್ ಕಂಪ್ಲೇಂಟ್!