Webdunia - Bharat's app for daily news and videos

Install App

ಟೀಂ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ ಶತಕದ ರಂಗು

Webdunia
ಗುರುವಾರ, 19 ಅಕ್ಟೋಬರ್ 2023 (21:49 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿ ಶತಕದ ಅಪರೂಪದ ಹಣಾಹಣಿಗೆ ಪುಣೆ ಪ್ರೇಕ್ಷಕರು ಸಾಕ್ಷಿಯಾದದರು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಈ ಗೆಲುವಿನ ಬೆನ್ನತ್ತಿದ ಟೀಂ ಇಂಡಿಯಾಗೆ ಎಂದಿನಂತೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಕೇವಲ 40 ಎಸೆತಗಳಲ್ಲಿ 48 ರನ್ ಗಳಿಸಿದ ರೋಹಿತ್ ಪುಲ್ ಶಾಟ್ ಹೊಡೆಯುವ ಭರದಲ್ಲಿ ಔಟಾದರು.

ಇನ್ನೊಂದೆಡೆ ತಾಳ್ಮೆಯ ಆಟಕ್ಕೆ ಕೈ ಹಾಕಿದ ಶುಬ್ಮನ್ ಗಿಲ್ 53 ರನ್ ಗಳಿಸಿ ಔಟಾದರು. ಆದರೆ ಕೊನೆಯ ಹಂತದಲ್ಲಿ ಕೊಹ್ಲಿ ಶತಕ ಮತ್ತು ಟೀಂ ಇಂಡಿಯಾ ಗೆಲುವಿನ ಪೈಪೋಟಿ ರೋಚಕವಾಗಿತ್ತು. ತಂಡದ ಗೆಲುವಿಗೆ 15 ರನ್ ಬೇಕಾಗಿದ್ದಾಗ ಕೊಹ್ಲಿ ಶತಕಕ್ಕೂ 15 ರನ್ ಬೇಕಾಗಿತ್ತು. ಈ ವೇಳೆ ಕೊಹ್ಲಿ ಒಂದು ಸಿಕ್ಸರ್ ಸಿಡಿಸಿದರು. ಆಗ ತಂಡದ ಗೆಲುವು ಮತ್ತು ಕೊಹ್ಲಿ ಶತಕಕ್ಕೆ 9 ರನ್ ಬೇಕಾಗಿತ್ತು. ಆ ಓವರ್ ನ ಕೊನೆಯ ಎಸೆತದಲ್ಲಿ ಸಿಂಗಲ್ಸ್ ತೆಗೆಯುವ ಮೂಲಕ ಕೊಹ್ಲಿ ಮುಂದಿನ ಓವರ್ ನಲ್ಲಿ ಬ್ಯಾಟಿಂಗ್ ಕಾಯ್ದುಕೊಂಡರು.

41 ನೆಯ ಓವರ್ ನಲ್ಲಿ ಎರಡನೆಯ ಎಸೆತ ವೈಡ್ ಆದಾಗ ಕೊಹ್ಲಿ ಕೊಂಚ ವಿಚಲಿತರಾದರು. ಮುಂದಿನ ಎಸೆತವನ್ನು ಚುರುಕಾಗಿ ಓಡಿ ಕೊಹ್ಲಿ ಎರಡು ರನ್ ಗಳಿಸಿದರು. ಆಗ ಭಾರತಕ್ಕೆ 5 ಕೊಹ್ಲಿಗೆ 6 ರನ್ ಬೇಕಾಗಿತ್ತು. ಈ ವೇಳೆ ಬಾಂಗ್ಲಾ ಬೌಲರ್ ಮಹಮೂದ್ ವೈಡ್ ಎಸೆತದ ಮೂಲಕ ಕೊಹ್ಲಿ ಶತಕಕ್ಕೆ ಅಡ್ಡಿಪಡಿಸುವ ಆತಂಕ ತಂದರೂ ಮರು ಓವರ್ ನ ಮೂರನೇ ಎಸೆತವನ್ನು ಸಿಕ್ಸರ್ ಗಟ್ಟಿದ ಕೊಹ್ಲಿ ಶತಕದ ಜೊತೆಗೆ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು. ಇದು ಕೊಹ್ಲಿಯ 48 ನೇ ಏಕದಿನ ಶತಕವಾಗಿತ್ತು. ವಿಶೇಷವೆಂದರೆ ಇನ್ನೊಂದು ತುದಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂತಹದ್ದೇ ಸಂದರ್ಭದಲ್ಲಿ ಶತಕ ಗಳಿಸಲಾಗದೇ 97 ರನ್ ಗಳಿಗೆ ಅಜೇಯರಾಗುಳಿದಿದ್ದ ಕೆಎಲ್ ರಾಹುಲ್ ಇದ್ದಿದ್ದು ವಿಶೇಷ. ಅಂತಿಮವಾಗಿ ಭಾರತ 41.3 ಓವರ್ ಗಳಲ್ಲಿ 261 ರನ್ ಗಳಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments