ಮುಂಬೈ: ಐಪಿಎಲ್ ಮುಗಿದ ಬಳಿಕ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಸರಣಿ ಆಡಲು ತೆರಳಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದಸ್ಯರ ಸಂಖ್ಯೆ ಕೇಳಿದರೆ ನೀವು ಬೆರಗಾಗುವುದು ಖಂಡಿತಾ.
									
										
								
																	
ಸಾಮಾನ್ಯವಾಗಿ ಒಂದು ಕ್ರಿಕೆಟ್ ಪ್ರವಾಸ ಸರಣಿಗೆ 15 ರಿಂದ 16 ಮಂದಿ ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಯಷ್ಟೇ ಪ್ರವಾಸ ಮಾಡುತ್ತಾರೆ. ಆದರೆ ಈ ಬಾರಿ ಆಸ್ಟ್ರೇಲಿಯಾಗೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಸಂಖ್ಯೆ ಬರೋಬ್ಬರಿ 30 ಇರಲಿದೆ. ಇವರಲ್ಲದೆ, ಸಹಾಯಕ ಸಿಬ್ಬಂದಿಗಳು, ಕೋಚ್ ಗಳು ಸೇರಿ ಒಟ್ಟು 50 ಮಂದಿ ಸದಸ್ಯರಿರಲಿದ್ದಾರೆ.
									
			
			 
 			
 
 			
			                     
							
							
			        							
								
																	ಇದಕ್ಕೆಲ್ಲಾ ಕಾರಣ, ಕೊರೋನಾ. ಪ್ರವಾಸದ ಮಧ್ಯೆ ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ ಅಥವಾ ಗಾಯಗೊಂಡದರೆ ತಕ್ಷಣಕ್ಕೆ ಬದಲಿ ಆಟಗಾರರನ್ನು ಇಲ್ಲಿಂದ ಕಳುಹಿಸಲು ನಿಯಮಗಳ ಅಡ್ಡಿ ಬರುತ್ತವೆ. ಇನ್ನು, ಆಸ್ಟ್ರೇಲಿಯಾದಲ್ಲಿ ಸುರಕ್ಷಿತವಾಗಿ ಅಭ್ಯಾಸ ನಡೆಸಲು, ಅಭ್ಯಾಸ ಪಂದ್ಯಗಳಾಡಲು ಪ್ರಥಮ ದರ್ಜೆ ಕ್ರಿಕೆಟಿಗರು ಬೇಕು. ಇವರೆಲ್ಲರ ತಂಡವನ್ನು ಬಿಸಿಸಿಐ ಒಟ್ಟಿಗೇ ಕಳುಹಿಸಲಿದೆ. ಹೀಗಾಗಿ ಈ ಬಾರಿ ಕೊಹ್ಲಿ ಆನೆಗಾತ್ರದ ತಂಡದ ಸದಸ್ಯರೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದಾರೆ.