Publish Date: Sun, 25 Jun 2017 (11:39 IST)
Updated Date: Sun, 25 Jun 2017 (11:41 IST)
ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ಆಟಗಾರರಿಗೆ ತುಂಬಿದ ಮೈದಾನದಲ್ಲಿ ಆಡಿಯೇ ಅಭ್ಯಾಸ. ಆದರೆ ವೆಸ್ಟ್ ಇಂಡೀಸ್ ಗೆ ಕಾಲಿಟ್ಟಾಗಿನಿಂದ ಅವರಿಗೆ ಹೊಸ ಅನುಭವವಾಗಿದೆ.
ಖಾಲಿ ಹೊಡೆಯುತ್ತಿರುವ ಮೈದಾನದಲ್ಲಿ ಬೆಳ್ಳಂ ಬೆಳಗ್ಗೆ ಅಲ್ಲಿನ ಕಾಲಮಾನ ಪ್ರಕಾರ 9 ಗಂಟೆಗೆ ಪಂದ್ಯ ಆರಂಭವಾಗುತ್ತಿದೆ. ಇಷ್ಟು ಬೇಗ ಪಂದ್ಯ ಆರಂಭವಾಗುವುದರಿಂದಲೋ ಏನೋ ಅಲ್ಲಿನ ಜನ ಮೈದಾನಕ್ಕೆ ಆಗಮಿಸುವುದೇ ಲೇಟು.
ಅದೂ ಅಲ್ಲದೆ, ಅಲ್ಲಿ ಇತ್ತೀಚೆಗೆ ಕ್ರಿಕೆಟ್ ಕ್ರೇಜ್ ಕಡಿಮೆಯಾಗಿದೆ. ಹೀಗಾಗಿ ನೀರಸವಾಗಿ ಪಂದ್ಯ ಸಾಗುತ್ತಿರುತ್ತದೆ. ಅದೆಲ್ಲದರ ಮಧ್ಯೆ ಇಂದು ಟೀಂ ಇಂಡಿಯಾ ದ್ವಿತೀಯ ಪಂದ್ಯಕ್ಕೆ ತಯಾರಾಗಿದೆ. ಯಥಾ ಪ್ರಕಾರ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.30 ಕ್ಕೆ ಪಂದ್ಯ ಆರಂಭವಾಗಲಿದ್ದು, ಭಾರತವೇ ಫೇವರಿಟ್ ಎನಿಸಿದೆ. ಟೆನ್ 3 ಚಾನೆಲ್ ನಲ್ಲಿ ಇದರ ನೇರಪ್ರಸಾರ ಲಭ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ