ನವದೆಹಲಿ: ತಮ್ಮ ಜತೆ ಕ್ರಿಕೆಟ್ ಆಡದೇ ಇದ್ದಿದ್ದಕ್ಕೆ ತಮಗೆ ಸಾಕಷ್ಟು ನಷ್ಟವಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಭಾರತ ಕ್ರಿಕೆಟ್ ಮಂಡಳಿ ಜತೆ ಕಾನೂನು ಸಮರಕ್ಕೆ ಮುಂದಾಗಿದೆ. ಇದಕ್ಕೆ ಭಾರತ ಮಣಿಯುತ್ತದಾ?
									
										
								
																	
 
ಪಾಕಿಸ್ತಾನ ಇತ್ತೀಚೆಗಷ್ಟೇ ಭಾರತಕ್ಕೆ 6.9 ಮಿಲಿಯನ್ ಡಾಲರ್ ಹಣ ನಷ್ಟ ಪರಿಹಾರ ನೀಡುವಂತೆ ಲೀಗಲ್ ನೋಟೀಸ್ ಜಾರಿ ಮಾಡಿತ್ತು. ಹಾಗಿದ್ದರೂ ಭದ್ರತಾ ಕಾರಣಗಳಿಂದಾಗಿ ಯಾವುದೇ ಕಾರಣಕ್ಕೂ ಆ ದೇಶದ ಜತೆ ಕ್ರಿಕೆಟ್ ಸರಣಿ ಆಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
									
			
			 
 			
 
 			
					
			        							
								
																	ಬಿಸಿಸಿಐ ಜಂಟಿ ಕಾರ್ಯದರ್ಸಿ ಅಮಿತಾಬ್ ಚೌಧರಿ ಕೂಡಾ ಸರ್ಕಾರದ ಒಪ್ಪಿಗೆಯಿಲ್ಲದೆ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿ ಆಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
									
										
								
																	ನಮಗೆ ಸರ್ಕಾರದ ಒಪ್ಪಿಗೆ ಬೇಕು. ಅಲ್ಲಿ ಭದ್ರತೆಯಿಲ್ಲ. ಹಾಗಿರುವಾಗ ನಮ್ಮ ಆಟಗಾರರನ್ನು ಅಪಾಯಕ್ಕೆ ದೂಡುವುದು ಹೇಗೆ? ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ. ಉಭಯ ದೇಶಗಳ ಕ್ರಿಕೆಟ್ ಸರಣಿ ಒಪ್ಪಂದದ ಬಗೆಗೆ ಸರ್ಕಾರಕ್ಕೆ ತಿಳಿಸಿದ್ದೇವೆ. ಸರ್ಕಾರದ ಒಪ್ಪಿಗೆ ಸಿಕ್ಕ ಮೇಲೇ ಮುಂದಿನ ಮಾತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ