Select Your Language

Notifications

webdunia
webdunia
webdunia
webdunia

‘ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಸೋಲಿಸಲಿದೆ’

‘ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಸೋಲಿಸಲಿದೆ’
Kolkotta , ಮಂಗಳವಾರ, 9 ಮೇ 2017 (08:39 IST)
ಕೋಲ್ಕೊತ್ತಾ: ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಯಾವುದೇ ಟೂರ್ನಿಗಿಂತ ದೊಡ್ಡ ವಿಷಯವಾಗಿ ಬಿಡುತ್ತದೆ. ಇದೀ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಉಭಯ ತಂಡಗಳು ಎದುರಾಗಲಿವೆ.

 
ಇದುವರೆಗೆ ವಿಶ್ವಕಪ್ ನಂತಹ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನವನ್ನು ಸೋಲಿಸಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲೂ ಭಾರತವೇ ಗೆಲ್ಲಲಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಜೂನ್ 4 ರಂದು ಎಡ್ಜ್ ಬಾಸ್ಟನ್ ನಲ್ಲಿ ಪಾಕಿಸ್ತಾನದ ಎದುರು ಟೀಂ ಇಂಡಿಯಾ ಮೊದಲ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯವೇ ಭಾರತಕ್ಕೆ ಅಗ್ನಿ ಪರೀಕ್ಷೆಯಾಗಲಿದೆ. ಉಭಯ ತಂಡಗಳ ನಡುವಿನ ಪಂದ್ಯವೆಂದರೆ ವೀಕ್ಷಕರೂ ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ.

ಆದರೆ ಭಾರತ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ದಾಖಲೆಯನ್ನು ಮುಂದುವರಿಸಲಿದೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಗೌತಮ್ ಗಂಭೀರ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗದಿರಲು ಕಾರಣ ಯಾರು?!