ಗುವಾಹಟಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಆರಂಭವಾಗಿದ್ದು, ಇಂದು ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಪಂದ್ಯವಾಡಲಿದೆ.
ರೋಹಿತ್ ಪಡೆಗೆ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಭ್ಯಾಸಕ್ಕೆ ಸೂಕ್ತ ವೇದಿಕೆ ಸಿಕ್ಕಿದೆ. ಹೀಗಾಗಿ ವಿಶ್ವಕಪ್ ಗೆ ಭಾರತ ತಂಡ ಈಗಾಗಲೇ ತನ್ನ ಆಡುವ ಬಳಗ ಹೇಗಿರಬೇಕು ಎಂದು ಲೆಕ್ಕಾಚಾರ ಪಕ್ಕಾ ಮಾಡಿಕೊಂಡಿದೆ.
ಇಂಗ್ಲೆಂಡ್ ಕೂಡಾ ಪ್ರಬಲ ಎದುರಾಳಿಯಾಗಿದ್ದು, ಭಾರತದಲ್ಲಿ ಆಂಗ್ಲರ ದಾಖಲೆ ಉತ್ತಮವಾಗಿಯೇ ಇದೆ. ಹೀಗಾಗಿ ಭಾರತ ತಂಡಕ್ಕೆ ಪ್ರಬಲ ತಂಡದ ವಿರುದ್ಧ ಅಭ್ಯಾಸ ನಡೆಸುವ ಅವಕಾಶ ಸಿಕ್ಕಂತಾಗಲಿದೆ. ಈ ಪಂದ್ಯ ಮಧ‍್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.