Publish Date: Tue, 08 Aug 2023 (17:11 IST)
Updated Date: Tue, 08 Aug 2023 (17:13 IST)
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ಇದುವರೆಗೆ ಟೀಂ ಇಂಡಿಯಾ ಸೋಲಿಗೆ ಬಹುದೊಡ್ಡ ಕಾರಣ ವಿಂಡೀಸ್ ಬ್ಯಾಟಿಗ ನಿಕಲಸ್ ಪೂರನ್.
ನಿಕಲಸ್ ಪೂರನ್ ಅದ್ಭುತ ಫಾರ್ಮ್ ನಲ್ಲಿದ್ದು, ಪ್ರತೀ ಪಂದ್ಯದಲ್ಲೂ ಭರ್ಜರಿ ಇನಿಂಗ್ಸ್ ಮೂಲಕ ಟೀಂ ಇಂಡಿಯಾದಿಂದ ಗೆಲುವು ಕಸಿದುಕೊಳ್ಳುತ್ತಿದ್ದಾರೆ. ಅವರ ಆಟಕ್ಕೆ ನಿಯಂತ್ರಣ ಹಾಕುವುದೇ ಭಾರತಕ್ಕೆ ದೊಡ್ಡ ಸವಾಲಾಗಿದೆ.
ಕಳೆದ ಎರಡೂ ಪಂದ್ಯಗಳಲ್ಲಿ ಪೂರನ್ ಕ್ರಮವಾಗಿ 41 ಮತ್ತು 67 ರನ್ ಸಿಡಿಸಿದ್ದರು. ತಂಡ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರೂ ಪೂರನ್ ತಮ್ಮದೇ ಶೈಲಿಯ ಆಟದಿಂದ ವಿಂಡಿಸ್ ಗೆ ದೊಡ್ಡ ಮೊತ್ತ ಗಳಿಸಲು ನೆರವಾಗುತ್ತಾರೆ. ಇದುವೇ ಟೀಂ ಇಂಡಿಯಾಗೆ ತಲೆನೋವಾಗಿದೆ. ಕಳೆದ ಪಂದ್ಯದಲ್ಲೂ ಆರಂಭದಲ್ಲೇ ಎರಡು ವಿಕೆಟ್ ಪಡೆದರೂ ಟೀಂ ಇಂಡಿಯಾ ಪೂರನ್ ಗೆ ಕಡಿವಾಣ ಹಾಕದೇ ಪಂದ್ಯ ಸೋತಿತ್ತು. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದಕ್ಕಿಂತ ಹೆಚ್ಚಾಗಿ ಪೂರನ್ ವಿಕೆಟ್ ಬೇಗನೇ ಕಬಳಸಿದೇ ಹೋದರೆ ಮತ್ತದೇ ಸೋಲಿನ ಕಟ್ಟಿಟ್ಟ ಬುತ್ತಿಯಾಗಿದೆ.