Select Your Language

Notifications

webdunia
webdunia
webdunia
webdunia

ಭಾರತ-ವೆಸ್ಟ್ ಇಂಡೀಸ್ ಮೂರನೇ ಟಿ20: ಟೀಂ ಇಂಡಿಯಾಕ್ಕೆ ಬೇಕಿದೆ ಗೆಲುವಿನ ಬೂಸ್ಟ್

ಭಾರತ-ವೆಸ್ಟ್ ಇಂಡೀಸ್ ಮೂರನೇ ಟಿ20: ಟೀಂ ಇಂಡಿಯಾಕ್ಕೆ ಬೇಕಿದೆ ಗೆಲುವಿನ ಬೂಸ್ಟ್
ಗಯಾನ , ಮಂಗಳವಾರ, 8 ಆಗಸ್ಟ್ 2023 (08:40 IST)
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರನೇ ಟಿ20 ಪಂದ್ಯ ನಡೆಯಲಿದೆ. ಎರಡು ಪಂದ್ಯ ಸೋತಿರುವ ಭಾರತಕ್ಕೆ ಇಂದು ಗೆಲುವು ಅನಿವಾರ್ಯವಾಗಿದೆ.

ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 0-2 ರಿಂದ ಹಿನ್ನಡೆಯಲ್ಲಿದೆ. ಇಂದಿನ ಪಂದ್ಯ ಸೋತರೆ ಟೀಂ ಇಂಡಿಯಾ ಸರಣಿ ಸೋಲು ಅನುಭವಿಸಲಿದೆ. ಹೀಗಾಗಿ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಕಳೆದ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಬ್ಯಾಟಿಂಗ್ ಕೈ ಕೊಟ್ಟಿತ್ತು. ಜೊತೆಗೆ ಎದುರಾಳಿ ಬ್ಯಾಟಿಗ ನಿಕಲಸ್ ಪೂರನ್ ಭಾರತಕ್ಕೆ ಸಿಂಹಸ್ವಪ್ನರಾಗಿದ್ದಾರೆ. ಈ ಪಂದ್ಯದಲ್ಲಿ ಭಾರತ ಕೆಲವು ಬದಲಾವಣೆ ಮಾಡಿಕೊಳ್ಳಬಹುದು. ಯಶಸ್ವಿ ಜೈಸ್ವಾಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿರುವ ಅಕ್ಸರ್ ಪಟೇಲ್ ಸ್ಥಾನ ಕಳೆದುಕೊಳ್ಳಬಹುದು. ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ತಮ್ಮ ಖ್ಯಾತಿಗೆ ತಕ್ಕ ಆಟವಾಡದೇ ಇರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಮಗಳಿಗಾಗಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದ ತಿಲಕ್ ವರ್ಮ