Publish Date: Mon, 15 Apr 2019 (07:59 IST)
Updated Date: Mon, 15 Apr 2019 (08:01 IST)
ಮುಂಬೈ: ಇಂದು ವಿಶ್ವಕಪ್ ಆಡಲಿರುವ ಟೀಂ ಇಂಡಿಯಾ ಪಟ್ಟಿ ಪ್ರಕಟವಾಗಲಿದ್ದು, ಯಾವ ಆಟಗಾರರು ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಟೀಂ ಇಂಡಿಯಾ ಬಹುತೇಕ ಫೈನಲ್ ಆಗಿದ್ದು, ನಂ.4 ಕ್ರಮಾಂಕಕ್ಕೆ ಆಟಗಾರನ ಆಯ್ಕೆಯೇ ಆಯ್ಕೆಗಾರರಿಗೆ ತಲೆನೋವಾಗಿದೆ. ಈ ಸ್ಥಾನಕ್ಕೆ ಸಾಕಷ್ಟು ಆಟಗಾರರ ಹೆಸರು ಕೇಳಿಬರುತ್ತಿದ್ದು, ಅಂತಿಮವಾಗಿ ಯಾರಿಗೆ ಅದೃಷ್ಟ ಖುಲಾಯಿಸಲಿದೆ ಎಂಬ ಕುತೂಹಲ ಮೂಡಿಸಿದೆ.
ಮುಖ್ಯವಾಗಿ ಈ ಸ್ಥಾನಕ್ಕೆ ಕೆಎಲ್ ರಾಹುಲ್ ಹೆಸರು ಕೇಳಿಬರುತ್ತಿದ್ದರೂ, ಟೀಂ ಇಂಡಿಯಾದಲ್ಲಿ ಅವರ ಹಿಂದಿನ ಫಾರ್ಮ್ ಗಮನಿಸಿದರೆ ಅವರ ಆಯ್ಕೆಯೂ ಅನುಮಾನವೆನಿಸಿದೆ. ಹೀಗಾಗಿ ಸ್ವತಃ ರಾಹುಲ್ ನಿರೀಕ್ಷೆಯಲ್ಲಿ ಕೂರುವಂತಾಗಿದೆ. ಅಂತಿಮವಾಗಿ ಯಾರಿಗೆಲ್ಲಾ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ನಂತರವೇ ತಿಳಿದುಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ