Select Your Language

Notifications

webdunia
webdunia
webdunia
webdunia

ಕುಲದೀಪ್ ಯಾದವ್, ರೋಹಿತ್ ಶರ್ಮಾ ದಾಳಿಗೆ ಪುಡಿಯಾಯಿತು ದಾಖಲೆಗಳು

ಕುಲದೀಪ್ ಯಾದವ್, ರೋಹಿತ್ ಶರ್ಮಾ ದಾಳಿಗೆ ಪುಡಿಯಾಯಿತು ದಾಖಲೆಗಳು
ಟ್ರೆಂಟ್ ಬ್ರಿಡ್ಜ್ , ಶುಕ್ರವಾರ, 13 ಜುಲೈ 2018 (09:04 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆಗಳು ಪುಡಿಯಾಗಿವೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕೂಡಾ ಹಲವು ದಾಖಲೆಗಳನ್ನು ಮಾಡಿದೆ.

ತಮ್ಮ 10 ಓವರ್ ಗಳ ಸ್ಪೆಲ್ ನಲ್ಲಿ ಕೇವಲ 25 ರನ್ ನೀಡಿ 6 ವಿಕೆಟ್ ಕಿತ್ತ ಕುಲದೀಪ್ ಯಾದವ್ ಜೀವನ ಶ್ರೇಷ್ಠ ಪ್ರದರ್ಶನ ತೋರಿದರು. ಅಷ್ಟೇ ಅಲ್ಲ ಇದು ಯಾವುದೇ ಎಡಗೈ ಸ್ಪಿನ್ನರ್ ಏಕದಿನ ಕ್ರಿಕೆಟ್ ನಲ್ಲಿ ತೋರಿದ ಶ್ರೇಷ್ಠ ಪ್ರದರ್ಶನ.

ಇನ್ನು ಶತಕಧಾರಿ ರೋಹಿತ್ ಶರ್ಮಾ ಸತತ ಏಳು ಏಕದಿನ ಸರಣಿಗಳಲ್ಲಿ ಶತಕ ಗಳಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ 2011 ರಿಂದ 2012 ರವರೆಗೆ 6 ಸರಣಿಗಳಲ್ಲಿ ಸತತವಾಗಿ ಶತಕ ಗಳಿಸಿದ್ದರು. ಅಷ್ಟೇ ಅಲ್ಲದೆ, ಇಂಗ್ಲೆಂಡ್ ನಲ್ಲಿ ಇಂಗ್ಲೆಂಡ್ ಎದುರು ಭಾರತೀಯನೊಬ್ಬ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ.

ಇನ್ನು ಟೀಂ ಇಂಡಿಯಾವೂ ಹಲವು ದಾಖಲೆಗಳನ್ನು ಮಾಡಿದೆ. ಇಂಗ್ಲೆಂಡ್ ನಲ್ಲೇ ಇಂಗ್ಲೆಂಡ್ ತಂಡದ ಎದುರು ಭಾರತ ದಾಖಲಿಸಿದ ಎರಡನೇ ಅತೀ ದೊಡ್ಡ ಗೆಲುವು ಇದಾಗಿದೆ. ನಾಯಕ ವಿರಾಟ್ ಕೊಹ್ಲಿ 50 ಏಕದಿನ ಪಂದ್ಯಗಳ ನಂತರ ಅತೀ ಹೆಚ್ಚು ಪಂದ್ಯಗಳಲ್ಲಿ (39) ಗೆಲುವು ದಾಖಲಿಸಿದ ವಿಶ್ವದ ನಾಯಕರಾದ ರಿಕಿ ಪಾಂಟಿಂಗ್, ಕ್ಲೈವ್ ಲಾಯ್ಡ್ ದಾಖಲೆಯನ್ನು ಸರಿಗಟ್ಟಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಮನಮೋಹಕ ಹೊಡೆತ ನೋಡುತ್ತಾ ನಿಂತುಬಿಟ್ಟ ಕೊಹ್ಲಿ, ಕೆಎಲ್ ರಾಹುಲ್!