Publish Date: Sat, 06 Oct 2018 (11:42 IST)
Updated Date: Sat, 06 Oct 2018 (11:46 IST)
ರಾಜ್ ಕೋಟ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರವಾಸಿ ತಂಡದ ವಿರುದ್ಧ ಫಾಲೋ ಆನ್ ಹೇರಿದೆ.
ಭಾರತದ ಮೊದಲ ಇನಿಂಗ್ಸ್ ಮೊತ್ತ 645 ಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ಕೇವಲ 181 ಕ್ಕೆ ಆಲೌಟ್ ಆಯಿತು. ಇದರ ನಂತರ ಟೀಂ ಇಂಡಿಯಾ ಎದುರಾಳಿಗೆ ಫಾಲೋ ಆನ್ ಹೇರಿದ್ದು, ವಿಂಡೀಸ್ ಮತ್ತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದೆ.
ವಿಂಡೀಸ್ ನ ಮೊದಲ ಇನಿಂಗ್ಸ್ ನಲ್ಲಿ ರವಿಚಂದ್ರನ್ ಅಶ್ವಿನ್ 4 ವಿಕೆಟ್, ಮೊಹಮ್ಮದ್ ಶಮಿ 2 ಮತ್ತು ಉಳಿದೆಲ್ಲಾ ಬೌಲರ್ ಗಳು ತಲಾ 1 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.