ಇಂಧೋರ್: ಟೀಂ ಇಂಡಿಯಾ ಬ್ಯಾಟಿಗರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನದಲ್ಲಿ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಶುಬ್ಮನ್ ಗಿಲ್, ಮೂರನೇ ಕ್ರಮಾಂಕದ ಬ್ಯಾಟಿಗ ಶ್ರೇಯಸ್ ಅಯ್ಯರ್ ದ್ವಿಶತಕದ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಗಿಲ್ 104, ಶ್ರೇಯಸ್ 105 ರನ್ ಗಳಿಸಿ ಔಟಾದರು. ಬಳಿಕ ಕೆಎಲ್ ರಾಹುಲ್ ಮತ್ತೊಂದು ಉಪಯುಕ್ತ ಅರ್ಧಶತಕ (52) ಸಿಡಿಸಿ ತಂಡಕ್ಕೆ ನೆರವಾದರು.
ಆದರೆ ಭಾರತದ ರನ್ ಅಬ್ಬರಕ್ಕೆ ಚಾಲೂ ನೀಡಿದ್ದು ಸೂರ್ಯಕುಮಾರ್ ಯಾದವ್. ಕೇವಲ 37 ಎಸೆತ ಎದುರಿಸಿದ ಎಸ್ ಕೆ ವೈ 6 ಸಿಕ್ಸರ್, 6 ಬೌಂಡರಿ ಸಹಿತ ಅಜೇಯ 72 ರನ್ ಚಚ್ಚಿದರು. ಸೂರ್ಯ ಸತತ ಸಿಕ್ಸರ್ ಗಳ ಸುರಿಮಳೆಗೈಯ್ದು ತಂಡದ ಮೊತ್ತವನ್ನು 400 ರ ಗಡಿ ತಲುಪಿಸಿದರು. ಇದೀಗ ಆಸೀಸ್ ಗೆಲ್ಲಲು 400 ರನ್ ಗಳಿಸಬೇಕಿದೆ.