Webdunia - Bharat's app for daily news and videos

Install App

ಟೀಂ ಇಂಡಿಯಾದಲ್ಲಿ ಆಡುವ ಬಳಗದ ಆಯ್ಕೆಯೇ ದೊಡ್ಡ ತಲೆನೋವು

Webdunia
ಬುಧವಾರ, 10 ಮಾರ್ಚ್ 2021 (09:19 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾದ ಆಡುವ ಬಳಗವನ್ನು ಆಯ್ಕೆ ಮಾಡುವುದೇ ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವಾಗಲಿದೆ.


ಎಷ್ಟೆಂದರೆ ಆರಂಭಿಕ ಸ್ಥಾನಕ್ಕೇ ಹೆಚ್ಚಿನ ಪೈಪೋಟಿಯಿದೆ. ರೋಹಿತ್ ಶರ್ಮಾ, ಶಿಖರ್ ಧವನ್, ಶಬ್ನಂ ಗಿಲ್ ಮತ್ತು ಕೆಎಲ್ ರಾಹುಲ್ ಸೇರಿದಂತೆ ಒಟ್ಟು ನಾಲ್ಕು ಕ್ರಿಕೆಟಿಗರು ಓಪನಿಂಗ್ ಸ್ಥಾನಕ್ಕಾಗಿ ರೇಸ್ ನಲ್ಲಿದ್ದಾರೆ. ಈ ಪೈಕಿ ರೋಹಿತ್ ಶರ್ಮಾಗೆ ಓಪನಿಂಗ್ ಸ್ಥಾನ ಖಚಿತ. ಅವರ ಜೊತೆಗೆ ಶಿಖರ್ ಧವನ್ ಆಡುವುದು ಬಹುತೇಕ ಖಚಿತ. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಸ್ಥಾನ ಹೊಂದಿದ್ದಾರೆ.

ಇನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ಮೂವರಿದ್ದಾರೆ. ರಿಷಬ್ ಪಂತ್, ರಾಹುಲ್, ಇಶಾನ್ ಕಿಶನ್. ಇವರಲ್ಲಿ ಯಾರನ್ನೇ ಹೊರಗಿಟ್ಟರೆ ಅನ್ಯಾಯವೇ. ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಗೆ ಸೂರ್ಯಕುಮಾರ್ ಯಾದವ್ ಹೊಸ ಸ್ಪರ್ಧಿಯಾಗಿ ಬಂದಿದ್ದಾರೆ.

ಇನ್ನು ಬೌಲಿಂಗ್ ನಲ್ಲೂ ಯಜುವೇಂದ್ರ ಚಾಹಲ್ ಜೊತೆಗೆ ಸ್ಪಿನ್ ವಿಭಾಗದಲ್ಲಿ ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ವಾಷಿಂಗ್ಟನ್ ಸುಂದರ್ ಇದ್ದಾರೆ. ವೇಗಿಗಳಲ್ಲೂ ಭುವನೇಶ‍್ವರ್ ಕುಮಾರ್ ಜೊತೆಗೆ ನವದೀಪ್ ಸೈನಿ, ಶ್ರಾದ್ಧೂಲ್ ಠಾಕೂರ್, ಟಿ ನಟರಾಜನ್ ಇವರಲ್ಲಿ ಯಾರಿಗೆ ಸ್ಥಾನ ಕೊಡುವುದು ಎಂಬುದೇ ದೊಡ್ಡ ತಲೆನೋವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rishabh Pant: ಚೆಂಡು ಬಡಿದ ರಭಸಕ್ಕೆ ರಿಷಭ್ ಪಂತ್ ಪಾದದ ಗತಿ ಏನಾಗಿದೆ ನೋಡಿ: ವಿಡಿಯೋ

ಭಾರತ–ಇಂಗ್ಲೆಂಡ್‌ ಟೆಸ್ಟ್‌: ದಾಖಲೆ ಬರೆದ ಕೆಲವೇ ಕ್ಷಣದಲ್ಲಿ ಗಾಯಗೊಂಡ ಮೈದಾನ ತೆರೆದ ರಿಷಭ್‌ ಪಂತ್‌

IND vs ENG: ಇಂಗ್ಲೆಂಡ್ ನೆಲದಲ್ಲಿ ದಾಖಲೆ ಮಾಡಿದ ಕೆಎಲ್ ರಾಹುಲ್

END vs IND Test: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗಿಲ್ ಪಡೆ, ತಂಡದಲ್ಲಿ ಮಹತ್ವದ ಬದಲಾವಣೆ

IND vs ENG: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದ ಯುವ ಬೌಲರ್ ಅಂಶುಲ್ ಕಾಂಬೋಜ್ ಯಾರು ಗೊತ್ತಾ

ಮುಂದಿನ ಸುದ್ದಿ
Show comments