Publish Date: Sat, 10 Aug 2019 (09:13 IST)
Updated Date: Sat, 10 Aug 2019 (09:15 IST)
ಮುಂಬೈ: ಬಿಸಿಸಿಐ ಕೃಪಾಕಟಾಕ್ಷದಿಂದ ಇಷ್ಟು ದಿನ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಾಡಾ ಸಮಿತಿಯ ಉದ್ದೀಪನಾ ಔಷಧ ಸೇವನೆ ಪರೀಕ್ಷೆಯ ಬಿಸಿ ಇರಲಿಲ್ಲ. ಆದರೆ ಇನ್ನು ಮುಂದೆ ಕ್ರಿಕೆಟಿಗರಿಗೂ ಈ ಬಿಸಿ ತಗುಲಲಿದೆ.
ಇಷ್ಟು ದಿನ ನಾಡಾ ಕಾರ್ಯನಿರ್ವಹಣೆ ಕುರಿತು ಅಸಮಾಧಾನ ಹೊಂದಿದ್ದ ಬಿಸಿಸಿಐ ಕ್ರಿಕೆಟಿಗರಿಗೆ ಈ ಪರೀಕ್ಷೆಗೊಳಪಡಿಸಲು ಒಪ್ಪಿರಲಿಲ್ಲ. ಆದರೆ ಪೃಥ್ವಿ ಶಾ ಪ್ರಕರಣದ ಬಳಿಕ ಬಿಸಿಸಿಐ ಈಗ ನಾಡಾ ಸಮಿತಿ ತನ್ನ ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸಲು ಒಪ್ಪಿದೆ.
ಅಲ್ಲದೆ, ನಾಡಾ ಕಾರ್ಯನಿರ್ವಹಣೆ ನಮಗೆ ತೃಪ್ತಿ ತಂದರೆ ಮುಂದಿನ ದಿನಗಳಲ್ಲಿ ಅದನ್ನು ಅಳವಡಿಸಲು ನಮಗೆ ಯಾವುದೇ ತೊಂದರೆಯಿಲ್ಲ ಎಂದಿದೆ. ಹೀಗಾಗಿ ಇನ್ನು ಮುಂದೆ ಕ್ರಿಕೆಟಿಗರೂ ಉದ್ದೀಪನಾ ಔಷಧಿ ಪ್ರಕರಣ ತೂಗುಗತ್ತಿಯ ಮೇಲೇ ನಡೆಯಬೇಕಿದೆ.