Select Your Language

Notifications

webdunia
webdunia
webdunia
webdunia

ಪಂದ್ಯಕ್ಕೂ ಮೊದಲೇ ಬಯಲಾಯ್ತಾ ಟೀಂ ಇಂಡಿಯಾ ರಹಸ್ಯ?!

ಪಂದ್ಯಕ್ಕೂ ಮೊದಲೇ ಬಯಲಾಯ್ತಾ ಟೀಂ ಇಂಡಿಯಾ ರಹಸ್ಯ?!
ಲಾರ್ಡ್ಸ್ , ಶುಕ್ರವಾರ, 10 ಆಗಸ್ಟ್ 2018 (10:11 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯವಾಡುವ ಮೊದಲೇ ತಂಡದ ಆಟಗಾರರ ಬಗ್ಗೆ ರಹಸ್ಯವಾಗಿರಬೇಕಿದ್ದ ಮಾಹಿತಿ ಔಟ್ ಆಯಿತೇ?!

ಸಾಮಾನ್ಯವಾಗಿ ಆಡುವ 11 ಕ್ರಿಕೆಟಿಗರ ಹೆಸರು ಟಾಸ್ ಸಂದರ್ಭದಲ್ಲಿ ನಾಯಕರು ಪರಸ್ಪರ ಪಟ್ಟಿ ಹಸ್ತಾಂತರಿಸುವಾಗಲೇ ಬಹಿರಂಗವಾಗುತ್ತದೆ. ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದ ಪಟ್ಟಿಯೊಂದು ಈಗಾಗಲೇ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ಟಾಸ್ ಗೂ ಮೊದಲೇ ಉಭಯ ತಂಡಗಳ ಆಟಗಾರರ ಹೆಸರು ಬಹಿರಂಗವಾದ ಅನುಮಾನ ಮೂಡಿಸಿದೆ.

ಈ ಲೀಕ್ ಆದ ಪಟ್ಟಿಯ ಪ್ರಕಾರ ಭಾರತ ತಂಡ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯಲಿದೆ. ಅತ್ತ ಇಂಗ್ಲೆಂಡ್ ಬೆನ್ ಸ್ಟೋಕ್ ಬದಲಿಗೆ ಕ್ರಿಸ್ ವೋಕ್ಸ್ ರನ್ನು ಕಣಕ್ಕಿಳಿಸಲಿದೆ. ಇದು ನಿಜವೇ ಸುಳ್ಳೇ ಎಂದು ತಿಳಿಯಬೇಕಾದರೆ ಟಾಸ್ ಆಗುವವರೆಗೂ ಕಾಯಲೇ ಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸೋಷಿಯಲ್ ಮೀಡಿಯಾದಲ್ಲಿ ಈ ಪರಿ ಟ್ರೋಲ್ ಆಗಿದ್ದು ಏಕೆ?