Publish Date: Fri, 10 Aug 2018 (09:03 IST)
Updated Date: Fri, 10 Aug 2018 (09:09 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಸೋತ ಮೇಲೆ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ತಿರುಗೇಟು ಕೊಡುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದರು. ಆದರೆ ವರುಣ ಅದಕ್ಕೆ ತಣ್ಣೀರೆರಚಿದ.
ಮೊದಲ ದಿನದಾಟ ಕ್ರಿಕೆಟಿಗರು ಊಟ-ತಿಂಡಿ ನಡುವೆಯೇ ಕಳೆದುಹೋಯ್ತು. ಆಗಾಗ ಅಂಪಾಯರ್ ಗಳು ಮೈದಾನಕ್ಕಿಳಿದು ಆಕಾಶ ನೋಡುವುದರಲ್ಲೇ ಕಳೆಯಿತು. ಮಧ್ಯಾಹ್ನದ ನಂತರ ಮಳೆ ನಿಂತರೂ ಮತ್ತೆ ಸುರಿದು ಪಂದ್ಯ ನಡೆಯುವ ಅವಕಾಶವೇ ಇಲ್ಲವಾಯಿತು. ಕ್ರಿಕೆಟಿಗರು ಆಗಾಗ ಲಂಚ್, ಟೀ ಬ್ರೇಕ್ ಗಳಲ್ಲೇ ದಿನ ಕಳೆಯುವಂತಾಯಿತು.
ಇದರಿಂದಾಗಿ ಟಾಸ್ ಕೂಡಾ ನಡೆಯಲಿಲ್ಲ. ಇಂದು ಹವಾಮಾನ ಸರಿಯಾಗಬಹುದು ಎಂಬ ಮುನ್ಸೂಚನೆ ಇದೆ. ಹೀಗಾಗಿ ಇಂದು ಪಂದ್ಯ ನಡೆಯಲು ಅವಕಾಶವಾದರೆ ಟಾಸ್ ಸಹಿತ ಆರಂಭದ ದಿನದಂತೇ ಎರಡನೇ ದಿನದ ಪಂದ್ಯ ಆರಂಭವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.