Select Your Language

Notifications

webdunia
webdunia
webdunia
webdunia

ಫಾರ್ಮ್ ಕಳೆದುಕೊಂಡ ಟೀಂ ಇಂಡಿಯಾ ಆಟಗಾರರಿಗೆಲ್ಲಾ ಇದೇ ವೇದಿಕೆ

ಫಾರ್ಮ್ ಕಳೆದುಕೊಂಡ ಟೀಂ ಇಂಡಿಯಾ ಆಟಗಾರರಿಗೆಲ್ಲಾ ಇದೇ ವೇದಿಕೆ
NewDelhi , ಮಂಗಳವಾರ, 31 ಜನವರಿ 2017 (12:30 IST)
ನವದೆಹಲಿ: ಕಳಪೆ ಫಾರ್ಮ್ ನಿಂದಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಔಟಾಗಿರುವ ಆರಂಭಿಕ ಶಿಖರ್ ಧವನ್ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ಮಿಂಚಿದ್ದಾರೆ.

 
ಆದರೆ ಟೀಂ ಇಂಡಿಯಾದ ಇನ್ನೊಬ್ಬ ಆರಂಭಿಕ ಗೌತಮ್ ಗಂಭೀರ್ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿ ದೆಹಲಿ ತಂಡ ಜಮ್ಮು ಕಾಶ್ಮೀರ ತಂಡವನ್ನು ಎಂಟು ವಿಕೆಟ್ ಗಳಿಂದ ಸೋಲಿಸಿತು.

ಧವನ್ 30 ಬಾಲ್ ಗಳಲ್ಲಿ 43 ರನ್ ಗಳಿಸಿ ಮಿಂಚಿದರು. ಗಂಭೀರ್ ಕೇವಲ 1 ರನ್ ಗಳಿಸಿ ಪೆವಲಿಯನ್ ಗೆ ಮರಳಿದರು. ಟೀಂ ಇಂಡಿಯಾದಲ್ಲಿ ಸ್ಥಾನ ವಂಚಿತರಾಗಿರುವ ಇನ್ನೊಬ್ಬ ಆಟಗಾರ ಇಶಾಂತ್ ಶರ್ಮಾ ವಿಕೆಟ್ ಕೀಳಲು ವಿಫಲರಾದರೂ 3 ಓವರ್ ಎಸೆದು ಕೇವಲ ಐದು ರನ್ ನೀಡಿ ಗಮನ ಸೆಳೆದರು.

ಇನ್ನೊಂದು ಪಂದ್ಯದಲ್ಲಿ ಹರ್ಯಾಣ ಪರ ಆಡಿದ ಟೀಂ ಇಂಡಿಯಾ ಸ್ಪಿನ್ನರ್ ಜಯಂತ್ ಯಾದವ್ ನಾಲ್ಕು ಓವರ್ ಗಳಲ್ಲಿ 10 ರನ್ ನೀಡಿ 1 ವಿಕೆಟ್ ಕಬಳಿಸಿ ತಾನು ಆಸ್ಟ್ರೇಲಿಯಾ ಸರಣಿಗೆ ಫಿಟ್ ಆಗಿದ್ದೇನೆಂದು ಸಾರಿದ್ದಾರೆ. ಇನ್ನೊಂದೆಡೆ ಹರ್ಭಜನ್ ಕೂಡಾ ಪಂಜಾಬ್  ಪರ ಆಡುತ್ತಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ವಂಚಿತರಿಗೆ ಈ ಕಿರು ಮಾದರಿ ಕ್ರಿಕೆಟ್ ಫಾರ್ಮ್ ಸಾಬೀತುಪಡಿಸುವ ವೇದಿಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಏನೇ ಸಂಶಯಗಳಿದ್ದರೂ ಹೊಸ ಬಿಸಿಸಿಐ ಬಾಸ್ ಗಳೇ ನಿವಾರಿಸುತ್ತಾರೆ’