Select Your Language

Notifications

webdunia
webdunia
webdunia
webdunia

ಲಂಕಾ ವಿರುದ್ಧ ಮತ್ತೊಮ್ಮೆ ಟೀಂ ಇಂಡಿಯಾ ರನ್ ರಾಶಿ

ಲಂಕಾ ವಿರುದ್ಧ ಮತ್ತೊಮ್ಮೆ ಟೀಂ ಇಂಡಿಯಾ ರನ್ ರಾಶಿ
ಕೊಲೊಂಬೊ , ಶುಕ್ರವಾರ, 4 ಆಗಸ್ಟ್ 2017 (12:37 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ. ಊಟದ ವಿರಾಮಕ್ಕೆ 5 ವಿಕೆಟ್ ಕಳೆದುಕೊಂಡು 442 ರನ್ ಗಳಿಸಿ ಸುಸ್ಥಿತಿಯಲ್ಲಿದೆ.


ಭಾರತದ ಪರ ನಿನ್ನೆ ಅಜೇಯರಾಗುಳಿದಿದ್ದ ಶತಕಧಾರಿ ಚೇತೇಶ್ವರ ಪೂಜಾರ ಇಂದು ಬೇಗನೇ ಔಟಾದರು. ಅವರ ಬೆನ್ನಲ್ಲೇ ನಿನ್ನೆಯ ಮೊತ್ತ ಮತ್ತೆ 29 ರನ್ ಸೇರಿಸಿ ಅಜಿಂಕ್ಯಾ ರೆಹಾನೆ ಕೂಡಾ ಪೆವಿಲಿಯನ್ ಸೇರಿಕೊಂಡರು.

ನಂತರ ತಂಡವನ್ನು ಆಧರಿಸಿದ ರವಿಚಂದ್ರನ್ ಅಶ್ವಿನ್ 47 ರನ್ ಗಳಿಸಿದ್ದು,  ಅರ್ಧಶತಕದ ಹಾದಿಯಲ್ಲಿದ್ದಾರೆ. ಅವರಿಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 16 ರನ್ ಗಳಿಸಿ ಜತೆ ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಂತೇ ಇಲ್ಲಿಯೂ ಭಾರತದ ಬ್ಯಾಟ್ಸ್ ಮನ್ ಗಳು ಸಂಪೂರ್ಣ ಹಿಡಿತ ಸಾಧಿಸಿದ್ದು, ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ಹುದ್ದೆ ಬಿಟ್ಟ ಮೇಲೆ ಅನಿಲ್ ಕುಂಬ್ಳೆ ಏನು ಮಾಡ್ತಿದ್ದಾರೆ?