Select Your Language

Notifications

webdunia
webdunia
webdunia
webdunia

ಕೋಚ್ ಹುದ್ದೆ ಬಿಟ್ಟ ಮೇಲೆ ಅನಿಲ್ ಕುಂಬ್ಳೆ ಏನು ಮಾಡ್ತಿದ್ದಾರೆ?

ಕೋಚ್ ಹುದ್ದೆ ಬಿಟ್ಟ ಮೇಲೆ ಅನಿಲ್ ಕುಂಬ್ಳೆ ಏನು ಮಾಡ್ತಿದ್ದಾರೆ?
ನವದೆಹಲಿ , ಶುಕ್ರವಾರ, 4 ಆಗಸ್ಟ್ 2017 (09:53 IST)
ನವದೆಹಲಿ: ಟೀಂ ಇಂಡಿಯಾ ಕೋಚ್ ಹುದ್ದೆ ಬಿಟ್ಟ ಮೇಲೆ ಅನಿಲ್ ಕುಂಬ್ಳೆ ಏನು ಮಾಡ್ತಿದ್ದಾರೆ? ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಿಗೂ ಕುತೂಹಲವಿರಬಹುದು.

 
ಇದೀಗ ವಿವಾದಗಳಿಂದ ಹೊರಬಂದ ಕುಂಬ್ಳೆ, ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಬಿಡುವಿನಲ್ಲಿರುವ ಕುಂಬ್ಳೆ ಇದೀಗ ಬಿರಿಯಾನಿ ತಿನ್ನುತ್ತಾ ಆರಾಮವಾಗಿದ್ದಾರಂತೆ!

ಹೌದು. ಅವರು ತಮ್ಮ ಹಳೆಯ ಸಹವರ್ತಿ ಇರ್ಫಾನ್ ಪಠಾಣ್ ಮನೆಗೆ ಹೋಗಿ ಭರ್ಜರಿಯಾಗಿ ಬಿರಿಯಾನಿ ಸವಿದು ಬಂದಿರುವುದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇರ್ಫಾನ್ ಫೋಟೋ ಹಾಕಿ ‘ಅನಿಲ್ ಬಾಯ್.. ಮನೆಗೆ ಬಂದಿದ್ದು ಖುಷಿಯಾಯ್ತು. ನಿಮಗೆ ಸಸ್ಯಾಹಾರ ಅಡುಗೆ ಇಷ್ಟವಾಗಿರಬಹುದು’ ಎಂದು ಪಠಾಣ್ ಟ್ವೀಟ್ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಕುಂಬ್ಳೆ, ‘ಅದರಲ್ಲೂ ವಿಶೇಷವಾಗಿ ಬಿರಿಯಾನಿ ತುಂಬಾ ಚೆನ್ನಾಗಿತ್ತು’ ಎಂದು ಬಾಯಿ ಚಪ್ಪರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ಮುಗಿಯದ ‘ರಾಹು’ ಕಾಟ