Publish Date: Sun, 05 Mar 2023 (08:50 IST)
Updated Date: Sun, 05 Mar 2023 (09:12 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅದರಲ್ಲೂ ವಿಶೇಷವಾಗಿ ಇತ್ತೀಚೆಗಿನ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಭಾರತ ಸಂಕಷ್ಟದಲ್ಲಿದ್ದಾಗಲೆಲ್ಲಾ ಕೆಳ ಕ್ರಮಾಂಕದಲ್ಲಿ ಬಿರುಸಿನ ಆಟವಾಡಿ ಸಂಕಷ್ಟದಿಂದ ಕಾಪಾಡಿದ್ದ ರಿಷಬ್ ಪಂತ್ ಈಗ ಆಕ್ಸಿಡೆಂಟ್ ನಿಂದಾಗಿ ಕ್ರಿಕೆಟ್ ನಿಂದ ದೂರವುಳಿದಿದ್ದಾರೆ.
ಇದೀಗ ನಡೆಯುತ್ತಿರುವ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನೇಕ ಬಾರಿ ಭಾರತ ಬ್ಯಾಟಿಂಗ್ ಸಂಕಷ್ಟಕ್ಕೀಡಾಗಿದೆ. ಅದರಲ್ಲೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇದ್ದ ಸಂಕಷ್ಟ ಪರಿಸ್ಥಿತಿಯಲ್ಲಿ ರಿಷಬ್ ಇದ್ದಿದ್ದರೆ ತಂಡದ ಸ್ಥಿತಿ ಹೀಗಾಗುತ್ತಿರಲಿಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ರಿಷಬ್ ಸದ್ಯಕ್ಕಂತೂ ಕ್ರಿಕೆಟ್ ಆಡುವ ಸ್ಥಿತಿಯಲ್ಲಿಲ್ಲ. ಆದರೆ ಅವರ ಅನುಪಸ್ಥಿತಿಯನ್ನು ನೀಗಿಸಬಲ್ಲ ಆಟಗಾರನ ಕೊರತೆ ಟೀಂ ಇಂಡಿಯಾಕ್ಕೆ ಕಾಡುತ್ತಿದೆ.