ಬಿಸಿಸಿಐ ಆರ್ಥಿಕ ನಷ್ಟ ತುಂಬಿಸುವ ಹೊಣೆ ಈಗ ಟೀಂ ಇಂಡಿಯಾ ಕ್ರಿಕೆಟಿಗರಿಗೆ!

ಸೋಮವಾರ, 18 ಮೇ 2020 (08:57 IST)
ಮುಂಬೈ: ಕೊರೋನಾದಿಂದಾಗಿ ಅತ್ತ ಐಪಿಎಲ್ ನಡೆದಿಲ್ಲ, ಇತ್ತ ಬೇರೆ ಕ್ರಿಕೆಟ್ ಸರಣಿಗಳೂ ರದ್ದಾಗುವ ಭೀತಿಯಿಲ್ಲಿದೆ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ.


ಐಪಿಎಲ್ ಎಂಬ ಶ್ರೀಮಂತ ಕ್ರೀಡಾಕೂಟ ರದ್ದಾದರೇ ಬಿಸಿಸಿಐ ಸುಮಾರು 4000 ಕೋಟಿ ರೂ. ನಷ್ಟ ಮಾಡಿಕೊಳ್ಳಲಿದೆ ಎಂದು ಗಂಗೂಲಿ ಈಗಾಗಲೇ ಹೇಳಿದ್ದಾರೆ. ಅಂದರೆ ಇಷ್ಟೊಂದು ದುಬಾರಿ ಮೊತ್ತವನ್ನು ಸರಿದೂಗಿಸುವ ಹೊಣೆ ಈಗ ಕ್ರಿಕೆಟಿಗರ ಮೇಲೆಯೂ ಬೀಳಲಿದೆ.

ಒಂದು ವೇಳೆ ಐಪಿಎಲ್ ಆಯೋಜಿಸಲು ಸಾಧ್ಯವಾಗದೇ ಹೋದರೆ ಬಿಸಿಸಿಐ ಆಟಗಾರರ  ವೇತನ ಕಡಿತ, ಒಂದೇ ಸಮಯಕ್ಕೆ ಎರಡು ಸರಣಿ ಆಯೋಜಿಸುವುದು, ಬಿಸಿಸಿಐನ ಇತರ ವೆಚ್ಚಗಳಿಗೆ ಕಡಿವಾಣ ಹಾಕುವುದು, ಆಟಗಾರರ ಜತೆ ಕುಟುಂಬ ಸದಸ್ಯರಿಗೂ ವಿದೇಶ ಪ್ರವಾಸದಲ್ಲಿ ಜತೆಯಾಗುವ ಅವಕಾಶ ಇತ್ಯಾದಿ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ. ಯಾವುದಕ್ಕೂ ಈಗ ಸರ್ಕಾರದ ನಿರ್ಧಾರವೇನು, ಕೊರೋನಾ ಪರಿಸ್ಥಿತಿ ಯಾವಾಗ ಸುಧಾರಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿಗೆ ಬೌನ್ಸರ್ ಎಸೆದ ಅನುಷ್ಕಾ! ವಿಡಿಯೋ ವೈರಲ್!