ಟೀಂ ಇಂಡಿಯಾಗೆ ಸೋಲಿನ ಶಾಪ ಶುರುವಾಗಿದ್ದು ಇಲ್ಲಿಂದಲೇ!

Webdunia
ಗುರುವಾರ, 8 ಡಿಸೆಂಬರ್ 2022 (08:50 IST)
Photo Courtesy: Twitter
ಮುಂಬೈ: ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾದಂತಹ ಕ್ರಿಕೆಟ್ ದೈತ್ಯರು ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ದೊರೆಗಳಾಗಿ ಮೆರೆದು ಕೊನೆಗೆ ಅವನತಿಯತ್ತ ಸಾಗಿದ್ದನ್ನು ನೋಡಿದ್ದೇವೆ. ಇದೀಗ ಟೀಂ ಇಂಡಿಯಾ ಪರಿಸ್ಥಿತಿಯೂ ಇದೇ ರೀತಿಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಯಿತು. ಆದರೆ ಅಲ್ಲಿಯವರೆಗೆ ಉಭಯ ದೇಶಗಳ ಸರಣಿಯನ್ನಾದರೂ ಗೆಲ್ಲುತ್ತಿದ್ದ ಟೀಂ ಇಂಡಿಯಾ ಇತ್ತೀಚೆಗೆ ಸೋಲುವುದನ್ನೇ ಅಭ್ಯಾಸ ಮಾಡಿಕೊಂಡಂತಿದೆ. ಇದಕ್ಕೆ ನಾಯಕತ್ವದಿಂದ ರೋಹಿತ್ ರನ್ನು ಕೆಳಗಿಳಿಸಬೇಕು, ದ್ರಾವಿಡ್ ರನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಬೇಕು ಎಂಬ ಆಕ್ರೋಶ ಕೇಳಿಬರುತ್ತಿದೆ.

ಆದರೆ ಅಸಲಿಗೆ, ಈ ಎಲ್ಲಾ ಸೋಲಿಗೆ ಕಾರಣವಾಗಿರುವುದು ಕೇವಲ ಇವರಿಬ್ಬರು ಅಲ್ಲ. ವಿರಾಟ್-ರವಿಶಾಸ್ತ್ರಿ ಕಾಲದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಿರ ಸದಸ್ಯರೇ ಇಲ್ಲ. ಪ್ರತೀ ಸರಣಿಗೂ ಹೊಸ ಆಟಗಾರರು, ಹೊಸ ನಾಯಕ. ಹಿರಿಯರಿಗೆ ಅತಿಯಾಗಿ ವಿಶ್ರಾಂತಿ ನೀಡುವುದು ಇತ್ಯಾದಿ ಹೆಚ್ಚಿದೆ. ಒಂದೇ ಒಂದು ಸರಣಿಯಲ್ಲಿ ಪೂರ್ಣ ಪ್ರಮಾಣದ ತಂಡ ಆಡಿದ್ದೇ ಇಲ್ಲ! ಈ ಅತಿಯಾದ ಪ್ರಯೋಗ ವಿಶ್ವಕಪ್ ದೃಷ್ಟಿಯಿಂದ ಎಂದು ಈ ಮೊದಲು ಕಾರಣ ನೀಡಲಾಗುತ್ತಿತ್ತು. ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಎಷ್ಟೇ ವಿಶ್ರಾಂತಿ ನೀಡಿದರೂ ಪ್ರಮುಖ ಬೌಲರ್ ಗಳಾದ ಬುಮ್ರಾ, ರವೀಂದ್ರ ಜಡೇಜಾ ಗಾಯಗೊಂಡು ತಂಡದಿಂದ ಹೊರಗುಳಿಯಬೇಕಾಯಿತು. ಅಲ್ಲಿಗೆ ರೊಟೇಷನ್ ಪದ್ಧತಿ ಎಂಬ ಹೆಸರಿನಲ್ಲಿ ಪದೇ ಪದೇ ಆಟಗಾರರನ್ನು, ನಾಯಕನನ್ನು ಬದಲಾಯಿಸಿರುವುದರಿಂದ ಎಳ್ಳಷ್ಟೂ ಪ್ರಯೋಜನವಾಗಿಲ್ಲ.

ಇನ್ನು, ಈಗಿನ ಟೀಂ ಇಂಡಿಯಾದಲ್ಲಿ ಬೌಲಿಂಗ್ ವಿಭಾಗ ಸ್ಟ್ರಾಂಗ್ ಮಾಡುವ ಯಾವುದೇ ಪ್ರಯತ್ನವೂ ನಡೆಯುತ್ತಿಲ್ಲ. ಯುವ ಬೌಲರ್ ಗಳನ್ನೇ ನಂಬಿಕೊಂಡು ಟೂರ್ನಿಗಳನ್ನು ಆಡಲಾಗುತ್ತಿದೆ. ಇದರಿಂದಲೇ ಬೌಲಿಂಗ್ ವಿಭಾಗ ದುರ್ಬಲವಾಗಿದ್ದು, ದುರ್ಬಲ ಎದುರಾಳಿಗಳೂ ಟೀಂ ಇಂಡಿಯಾ ವಿರುದ್ಧ ಭರ್ಜರಿ ರನ್ ಗಳಿಸುತ್ತಿದ್ದಾರೆ. ಇವೆಲ್ಲವನ್ನೂ ಬಿಟ್ಟು ಮೊದಲಿನಂತೇ ಎಲ್ಲಾ ಪ್ರಮುಖರನ್ನೂ ಪ್ರತೀ ಪಂದ್ಯದಲ್ಲಿ ಆಡಿಸುವುದು, ಒಂದು ಸ್ಥಿರ ತಂಡ ಕಟ್ಟುವ ಪ್ರಯತ್ನ ನಡೆದರೆ ಮಾತ್ರ ಭಾರತ ತಂಡಕ್ಕೆ ಯಶಸ್ಸು ಸಿಗಬಹುದು. ಇಲ್ಲದೇ ಹೋದರೆ ಸೋಲು ಸಾಮಾನ್ಯವಾಗಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಶುಭಮನ್‌ ಗಿಲ್‌ ಶತಕಕ್ಕೆ ಒಲಿದ ಜಯ: ಫೈನಲ್‌ನಲ್ಲಿ ಆರ್‌ಸಿಬಿ- ಟೈಟನ್ಸ್‌ ಸೆಣಸಾಟ

ಕಳಪೆ ಪ್ರದರ್ಶನದ ಬಳಿಕ ಎಲ್‌ಎಸ್‌ಜಿ ನಾಯಕತ್ವದಿಂದ ರಿಷಭ್‌ ಪಂತ್‌ಗೆ ಗೇಟ್‌ಪಾಸ್‌

IPL 2026: ಇಂದು ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ಸ್‌-ಟೈಟನ್ಸ್‌ ಫೈಟ್: ಯಾರಿಗೆ ಸಿಗಲಿದೆ ಫೈನಲ್‌ ಟಿಕೆಟ್‌

ಶತಕ ಜಸ್ಟ್‌ ಮಿಸ್ ಆದಾಗ ಸಪ್ಪೆ ಮುಖ ಮಾಡಿ ನಿಂತ ವೈಭವ್‌ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್‌ ಆಟಗಾರರು ಏನ್ ಮಾಡಿದ್ರು ನೋಡಿ, Video

IPL 2026: ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ವೈಭವ: ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌

ಮುಂದಿನ ಸುದ್ದಿ
Show comments