ಭಾರತ-ಇಂಗ್ಲೆಂಡ್ ಏಕದಿನ: ಬೌಲರ್ ಗಳ ಶ್ರಮವನ್ನು ಬ್ಯಾಟಿಗರು ವ್ಯರ್ಥ ಮಾಡಿದರು!

Webdunia
ಶುಕ್ರವಾರ, 15 ಜುಲೈ 2022 (08:10 IST)
ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಏಕದಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಶ್ರಮವನ್ನು ಬ್ಯಾಟಿಗರು ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥ ಮಾಡಿ ತಂಡದ ಸೋಲಿಗೆ ಕಾರಣವಾದರು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49 ಓವರ್ ಗಳಲ್ಲಿ 246 ರನ್ ಗಳಿಗೆ ಆಲೌಟ್ ಆಯಿತು. ಜಾನಿ ಬೇರ್ ಸ್ಟೋ 38, ಲಿವಿಂಗ್ ಸ್ಟೋನ್ 33 ರನ್ ಗಳಿಸಿದರು. ಕೊನೆಯ ಕ್ರಮಾಂಕದಲ್ಲಿ ಮೊಯಿನ್ ಅಲಿ ಅಮೂಲ್ಯ 47 ರನ್ ಮತ್ತು ಡೇವಿಡ್ ವಿಲ್ಲಿ 41 ರನ್ ಗಳ ಕೊಡುಗೆ ನೀಡಿದ್ದು ಇಂಗ್ಲೆಂಡ್ ಗೌರವಯುತ ಮೊತ್ತ ಗಳಿಸಲು ನೆರವಾಯಿತು. ಭಾರತದ ಪರ ಯಜುವೇಂದ್ರ ಚಾಹಲ್ 4, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ 2, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಬಳಿಸಿದರು. ಪ್ರಸಿದ್ಧ ಕೃಷ್ಣ ಅತಿ ದುಬಾರಿ ಎನಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ರೋಹಿತ್ ಶರ್ಮಾ ರೂಪದಲ್ಲಿ ಆಘಾತ ಸಿಕ್ಕಿತು.  ರೋಹಿತ್, ರಿಷಬ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದರು. ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದ ವಿರಾಟ್ ಕೊಹ್ಲಿ 16, ಶಿಖರ್ ಧವನ್ 9 ರನ್ ಗೆ  ಔಟಾದರು. ಸೂರ್ಯಕುಮಾರ್ ಯಾದವ್ 27, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 29 ಮತ್ತು ಮೊಹಮ್ಮದ್ ಶಮಿ 23 ರನ್ ಗಳಿಸದೇ ಹೋಗಿದ್ದಲ್ಲಿ ಭಾರತ 100 ರೊಳಗೆ ಆಲೌಟ್ ಆಗುತ್ತಿತ್ತು. ಆದರೆ ಅಂತಿಮವಾಗಿ 38.5 ಓವರ್ ಗಳಲ್ಲಿ 146 ರನ್ ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ರೀಸ್ ಟೋಪ್ಲೆ 6 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದು ಕಠಿಣ ಎದುರಾಳಿ

ಐದು ವರ್ಷಗಳ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ: ರೋಹಿತ್‌ ಶರ್ಮಾಗೆ ಶಾಕ್‌

IND vs NZ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾಗೆ ಕಾಡುತ್ತಿದೆ ಈ ಬೌಲರ್ ನ ಕೊರತೆ

IND vs NZ: ಒತ್ತಡದಲ್ಲಿ ಆಡಿ ಶತಕ ಗಳಿಸಿದ ಕೆಎಲ್ ರಾಹುಲ್ ಗೆ ಬಹುಪರಾಕ್

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

ಮುಂದಿನ ಸುದ್ದಿ
Show comments