Publish Date: Mon, 28 Jun 2021 (08:43 IST)
Updated Date: Mon, 28 Jun 2021 (09:07 IST)
ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ 20 ದಿನಗಳ ಸುದೀರ್ಘ ಬ್ರೇಕ್ ಸಿಕ್ಕಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಸಿಕ್ಕ ಈ ಬಿಡುವಿನ ವೇಳೆಯನ್ನು ಕ್ರಿಕೆಟಿಗರು ಆಂಗ್ಲರ ನೆಲದ ಪ್ರವಾಸೀ ತಾಣಗಳಲ್ಲಿ ಕುಟುಂಬ ಸಮೇತ ಸುತ್ತಾಡುವ ಮೂಲಕ ರಜಾ ಮಜಾ ಮಾಡುತ್ತಿದ್ದಾರೆ.
ಈಗಾಗಲೇ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್ ತಮ್ಮ ಕುಟುಂಬ ಸಮೇತರಾಗಿ ಪ್ರವಾಸೀ ತಾಣಗಳಲ್ಲಿ ಮೋಜು ಮಾಡುತ್ತಿರುವ ಫೋಟೋಗಳನ್ನು ಪ್ರಕಟಿಸಿದ್ದಾರೆ. ಸೋಲಿನ ಬಳಿಕ ಟೀಂ ಇಂಡಿಯಾಗೆ ಸಿಕ್ಕ ಸುದೀರ್ಘ ಬಿಡುವಿಗೆ ಮಾಜಿ ಕ್ರಿಕೆಟಿಗರಿಂದ ಟೀಕೆಗಳೂ ಕೇಳಿಬಂದಿದೆ. ಆದರೆ ಅಭ್ಯಾಸ ಪಂದ್ಯವೂ ಇಲ್ಲದ ಕಾರಣ ಕ್ರಿಕೆಟಿಗರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.